

ನವದೆಹಲಿ: ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವಂತೆ ದೇಶದ 69,000 ದಷ್ಟು ಪೆಟ್ರೋಲ್ ಪಂಪ್ಗಳಲ್ಲಿ EV ಚಾರ್ಜಿಂಗ್ ಕಿಯೋಸ್ಕ್ಗಳನ್ನು ತೆರೆಯುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರ ಒಲವು ತೋರಿಸಿದೆ.
ಎಲ್ಲ ಪೆಟ್ರೋಲ್ ಪಂಪ್ಗಳಲ್ಲಿ ಇದನ್ನು ಕಡ್ಡಾಯವಾಗಿ ಸ್ಥಾಪಿಸಲು ನಿರ್ದೇಶನ ನೀಡುವುದಕ್ಕೂ ಸರ್ಕಾರ ಚಿಂತನೆ ನಡೆಸಿದೆ. ವಿಶೇಷವಾಗಿ ಕಂಪನಿ ಓನ್ಡ್ ಅಥವಾ ಕಂಪನಿ ಆಪರೇಟೆಡ್ ಮಾದರಿಯ ಕಿಯೋಸ್ಕ್ಗಳನ್ನು ಸ್ಥಾಪಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನಿರ್ದೇಶನ ನೀಡುವ ನಿರೀಕ್ಷೆ ಇದೆ.
EV ಚಾರ್ಜಿಂಗ್ ಮೂಲಸೌಕರ್ಯ ಪರಿಶೀಲನೆ ಸಭೆಯಲ್ಲಿ ಇಂಧನ ಸಚಿವ ಆರ್.ಕೆ.ಸಿಂಗ್ ಅವರು ಈ ಬಗ್ಗೆ ತೈಲ ಕಂಪನಿಗಳಿಗೆ ಸುಳಿವು ನೀಡಿದ್ದಾರೆ. ತೈಲ ಸಚಿವಾಲಯ ಪ್ರಕಟಿಸಿರುವ ಹೊಸ ಮಾರ್ಗಸೂಚಿ ಪ್ರಕಾರ, ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಒಂದು ಪರ್ಯಾಯ ಇಂಧನ ಭರ್ತಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಇದರಂತೆ, ಬಹುತೇಕ ಪೆಟ್ರೋಲ್ ಬಂಕ್ಗಳು EV ಚಾರ್ಜಿಂಗ್ ಸೌಲಭ್ಯ ಒದಗಿಸಲು ಮುಂದಾಗಿವೆ.
ಇದನ್ನೂ ಓದಿ: ಚರಂಡಿ ಮುಚ್ಚಳಕ್ಕೆ ಗಂಟುಬಿದ್ದ ಕಳ್ಳರು!
ಆರಂಭಿಕ ಹಂತದಲ್ಲಿ ದೆಹಲಿ ನ್ಯಾಷನಲ್ ಕ್ಯಾಪಿಟಲ್ ರೀಜಿಯನ್, ಕೋಲ್ಕತ, ಚೆನ್ನೈ, ಹೈದರಾಬಾದ್, ಬೆಂಗಳೂರು, ವಡೋದರಾ, ಭೋಪಾಲಗಳಲ್ಲಿ EV ಚಾರ್ಜಿಂಗ್ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)