

ಬೆಂಗಳೂರು: ರಂಜಕಯುಕ್ತ ರಸಗೊಬ್ಬರಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್, ಗ್ರೋಮೋರ್ ಪ್ಯಾರಾಂಪಸ್ ಹಾಗೂ ಗ್ರೋಮೋರ್ ಗೊಬ್ಬರ ದರವನ್ನು ಇಳಿಕೆ ಮಾಡಿದೆ.
ಪ್ರತಿ ಚೀಲದ ಮೇಲೆ 50 ರೂ ಹಾಗೂ ಪ್ರತಿ ಟನ್ ಮೇಲೆ 1 ಸಾವಿರ ರೂ. ಕಡಿತಗೊಳಿಸಿದೆ. ಕಂಪನಿಯು ರೈತರ ಸೇವೆಯಲ್ಲಿ ಸದಾ ಮುಂದಿದ್ದು, ಕರೊನಾ ಸಂಕಷ್ಟ ಎದುರಾಗಿರುವ ಹಾಗೂ ದೀಪಾವಳಿ ಪ್ರಯುಕ್ತ ರಸಗೊಬ್ಬರಗಳ ಬೆಲೆಯನ್ನು ಇಳಿಸಲಾಗಿದೆ ಎಂದು ಕಂಪನಿ ಹಿರಿಯ ವ್ಯವಸ್ಥಾಪಕ ಕೆ.ಪ್ರಭುಸ್ವಾಮಿ ತಿಳಿಸಿದ್ದಾರೆ.