ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್​ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ

Petrol 10 Feb 20
Published on

ನವದೆಹಲಿ: ಕಳೆದ ಏಳು ದಿನ ಅವಧಿಯಲ್ಲಿ ಯಾವುದೇ ಏರಿಕೆ ಇಲ್ಲದೆ ತಟಸ್ಥವಾಗಿದ್ದ ಡೀಸೆಲ್ ದರ ಮಂಗಳವಾರ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್​ಗೆ 80.78 ರೂಪಾಯಿ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಪ್ರತಿ ಲೀಟರ್​ಗೆ 80.78 ರೂಪಾಯಿ ಪೆಟ್ರೋಲ್ ಬೆಲೆಯಲ್ಲಿ ಸತತ 8ನೇ ದಿನವೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ಜೂನ್ 29 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಕರೊನಾ ಬಿಕ್ಕಟ್ಟಿನ ಹಿನ್ನೆಲೆ ಸ್ಥಗಿತವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಗಳ ನಿತ್ಯ ಪರಿಷ್ಕರಣೆ ಕಳೆದ ಜೂನ್ 7ರಿಂದ ಪ್ರಾರಂಭವಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಡೀಸೆಲ್ 23 ಬಾರಿ ಹಾಗೂ ಪೆಟ್ರೋಲ್ 21 ಬಾರಿ ಬೆಲೆ ಹೆಚ್ಚಳವಾಗಿದೆ. ಅಂದರೆ ಪೆಟ್ರೋಲ್ ಒಟ್ಟು 9.17 ರೂ. ಹಾಗೂ ಡೀಸೆಲ್ 11.39 ರೂಪಾಯಿ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಮಂಗಳವಾರ ಪ್ರತಿ ಲೀಟರ್​ಗೆ 83.04 ರೂಪಾಯಿ, ಡೀಸೆಲ್ ದರ ಪ್ರತಿ ಲೀಟರಿಗೆ 76.79 ರೂಪಾಯಿ ಇತ್ತು. ಬೆಂಗಳೂರಿನಲ್ಲಿ ಡೀಸೆಲ್​ ದರ ಪ್ರತಿ ಲೀಟರಿಗೆ 21 ಪೈಸೆ ಏರಿಕೆಯಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net