More

    ಸಂಸದೀಯ ಸಮಿತಿ ಸಭೆಗೆ 8 ಅಂಶಗಳ ಪ್ರೊಟೊಕಾಲ್

    ನವದೆಹಲಿ: ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮತ್ತು ಹೋಮ್ ಅಫೇರ್ಸ್​ಗೆ ಸಂಬಂಧಿಸಿದ ಸಂಸದೀಯ ಸಮಿತಿ ಸಭೆ ಜುಲೈ 10 ಮತ್ತು 15ರಂದು ನಡೆಯಲಿದೆ. ಇದರಲ್ಲಿ ಭಾಗಿಯಾಗುವ ಸಮಿತಿ ಸದಸ್ಯರಾದ ಸಂಸದರಿಗೆ ಅನ್ವಯವಾಗುವ ಎಂಟು ಅಂಶಗಳ ಪ್ರೊಟೊಕಾಲ್​ ಅನ್ನು ರಾಜ್ಯಸಭಾ ಸಚಿವಾಲಯ ಬಿಡುಗಡೆ ಮಾಡಿದೆ.

    ಹೋಮ್ ಅಫೇರ್ಸ್​ಗೆ ಸಂಬಂಧಿಸಿದ ಸಂಸದೀಯ ಸ್ಥಾಯೀಸಮಿತಿ ಸಭೆ ಆನಂದ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆ ಜೂನ್ 3ಕ್ಕೆ ನಿಗದಿಯಾಗಿತ್ತು. ಆದರೆ, ಈ ಸಭೆ ಕೋವಿಡ್ ಪರಿಸ್ಥಿತಿಯ ಕಾರಣಕ್ಕೆ ಸದಸ್ಯರಿಗೆ ಹಾಜರಾಗುವುದು ಕಷ್ಟವಾದ ಕಾರಣ ಮುಂದೂಡಲ್ಪಟ್ಟಿತ್ತು. ಇದೇ ರೀತಿ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸ್ಥಾಯೀ ಸಮಿತಿ ಸಭೆ ಜೈರಾಮ್ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿತ್ತು. ಅವರಿಗೂ ಬರುವುದಕ್ಕೆ ಆಗದೇ ಇದ್ದ ಕಾರಣ, ವರ್ಚುವಲ್​ ಮೀಟಿಂಗ್​ಗೆ ಅವಕಾಶ ನೀಡುವಂತೆ ರಾಜ್ಯಸಭಾ ಅಧ್ಯಕ್ಷರಿಗೆ ಮನವಿ ಮಾಡಿದ್ದರು.

    ಇದನ್ನೂ ಓದಿ: ಈ ಬ್ಯಾಂಕುಗಳ ಉದ್ಯೋಗಿಗಳ ಸಂಬಳ ದುಪ್ಪಟ್ಟು!

    ಹೊಸ ಪ್ರೊಟೊಕಾಲ್ ಪ್ರಕಾರ ಆರು ಅಡಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಬೇಕು. ಕೋವಿಡ್​ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳು ಸೇರಿ ಎಂಟು ಅಂಶಗಳ ಪ್ರೊಟೊಕಾಲ್​ ಪ್ರಕಟವಾಗಿದೆ. ಆದಾಗ್ಯೂ, ಸಭೆಯಲ್ಲಿ ಅಗತ್ಯ ಸದಸ್ಯ ಹಾಜರಾತಿಯನ್ನು ಕಾಯ್ದುಕೊಳ್ಳುವ ಸವಾಲು ಎದುರಾಗಿದೆ. ಸದ್ಯದ ಮಾಹಿತಿ ಪ್ರಕಾರ, ಬಹುತೇಕ ಸದಸ್ಯರು ನೇರ ಪಾಲ್ಗೊಳ್ಳುವಿಕೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ವರ್ಚುವಲ್ ಮೀಟಿಂಗ್​ ಕಡೆಗೆ ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಎಂಟು ತಿಂಗಳ ಮಗುವನ್ನು ಉಳಿಸಿಕೊಳ್ಳಬೇಕೆಂದು 400 ಕಿ.ಮೀ. ಪ್ರಯಾಣ ಮಾಡಿದ್ರು ಆ ಅಪ್ಪ-ಅಮ್ಮ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts