More

    ಈ ಬ್ಯಾಂಕುಗಳ ಉದ್ಯೋಗಿಗಳ ಸಂಬಳ ದುಪ್ಪಟ್ಟು!

    ನವದೆಹಲಿ: ಕೋವಿಡ್​ 19 ಲಾಕ್​ಡೌನ್ ನಂತರದಲ್ಲಿ ಅನೇಕ ಕ್ಷೇತ್ರಗಳ ಉದ್ಯೋಗಿಗಳ ವೇತನ ಕಡಿತಗೊಂಡು ತೊಂದರೆ ಅನುಭವಿಸುತ್ತಿದ್ದರೆ, ಈ ಬ್ಯಾಂಕುಗಳ ಉದ್ಯೋಗಿಗಳ ವೇತನ ದುಪ್ಪಟ್ಟಾಗಿದೆ!. ಇದು ಈ ತಿಂಗಳ ಮೊದಲ ದಿನದಿಂದಲೇ ಅನ್ವಯವಾಗಿದ್ದು, ಆಗಸ್ಟ್​ನಲ್ಲಿ ಕೈ ಸೇರಲಿದೆ ದುಪ್ಪಟ್ಟಾದ ವೇತನ.

    ಹೌದು ಇದು ರಾಜಸ್ಥಾನ ಕೋ ಆಪರೇಟಿವ್ ಬ್ಯಾಂಕುಗಳ ಉದ್ಯೋಗಿಗಳಿಗೆ ಖುಲಾಯಿಸಿದ ಅದೃಷ್ಟ. ರಾಜಸ್ಥಾನ ಸಹಕಾರ ಸಚಿವ ಉದಯಾಲಾ ಅಂಜನಾ ಈ ವಿಷಯವನ್ನು ಖಚಿತಪಡಿಸಿದ್ದು, ಅಧಿಸೂಚನೆಯೂ ಪ್ರಕಟವಾಗಿದೆ. ಬ್ಯಾಂಕಿಗೆ ನೇರವಾಗಿ ನೇಮಕವಾಗಿರುವ ಎಲ್ಲ ಉದ್ಯೋಗಿಗಳಿಗೆ ಅಂದರೆ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಈ ತಿಂಗಳಿಂದ ದುಪ್ಪಟ್ಟು ವೇತನ ಪಡೆಯಲಿದ್ದಾರೆ. ರಾಜಸ್ಥಾನ ಸ್ಟೇಟ್ ಕೋ ಆಪರೇಟಿವ್​ ಬ್ಯಾಂಕ್ ಲಿಮಿಟೆಡ್​ (ಅಪೆಕ್ಸ್ ಬ್ಯಾಂಕ್​), ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಉದ್ಯೋಗಿಗಳು ಇದರ ಫಲಾನುಭವಿಗಳು. ಪ್ರೊಬೆಷನರಿ ಅವಧಿಯಲ್ಲಿರುವವರಿಗೂ ಇದು ಅನ್ವಯವಾಗಲಿದೆ. ಸಹಾನುಭೂತಿಯ ನೆಲೆಯಲ್ಲಿ ಸರ್ಕಾರ ಈ ವೇತನ ಹೆಚ್ಚಳ ಮಾಡಿದೆ.

    ಇದನ್ನೂ ಓದಿ: ಚರ್ಚೆಗೆ ಗ್ರಾಸವಾದ ಬಾಲಕಿ ಬಿಡುಗಡೆ ಪ್ರಕರಣ

    ರಾಜಸ್ಥಾನ ಕೋ ಆಪರೇಟಿವ್ ಬ್ಯಾಂಕಿನ ಎಲ್ಲ ಸೀನಿಯರ್ ಮ್ಯಾನೇಜರ್​ಗಳು 22,180 ರೂಪಾಯಿ ಪಡೆಯುತ್ತಿದ್ದವರು ಇನ್ನು 30,680 ರೂಪಾಯಿ, ಎಲ್ಲ ಮ್ಯಾನೇಜರ್​ಗಳು 14,660 ರೂಪಾಯಿ ಪಡೆಯುತ್ತಿದ್ದವರು 23,860 ರೂಪಾಯಿ, ಎಲ್ಲ ಬ್ಯಾಂಕ್ ಅಸಿಸ್ಟೆಂಟ್​ಗಳು 8,910 ರೂಪಾಯಿ ಪಡೆಯುತ್ತಿದ್ದವರು 11,950 ರೂಪಾಯಿ, ಪ್ರತಿಯೊಬ್ಬ ಕ್ಲಾಸ್ 4 ಕೆಟಗರಿಯ ಉದ್ಯೋಗಿಗಳು 4,850 ರೂಪಾಯಿ ಪಡೆಯುತ್ತಿದ್ದವರು 10,640 ರೂಪಾಯಿ ವೇತನ ಪಡೆಯಲಿದ್ದಾರೆ. (ಏಜೆನ್ಸೀಸ್)

    VIDEO|ಸೈಂಟಿಫಿಕ್ ಫಿಕ್ಷನ್ ಸಿನಿಮಾದ ನಾಯಕಿ: ಈಕೆ ಜಗತ್ತಿನ ಮೊದಲ ಎಐ ಆರ್ಟಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts