ಬಿಎಸ್-4 ನೋಂದಣಿಗೆ ತಡೆ

bs4 vehicles
Published on

ನವದೆಹಲಿ: ಭಾರತ್ ಸ್ಟೇಜ್-4 (ಬಿಎಸ್-4) ಶ್ರೇಣಿಯ ವಾಹನಗಳ ಮಾರಾಟಕ್ಕೆ ನೀಡಿದ್ದ 10 ದಿನಗಳ ಹೆಚ್ಚುವರಿ ಅವಧಿಯ ಅನುಮತಿಯನ್ನು ಬುಧವಾರ ಹಿಂಪಡೆದಿರುವ ಸುಪ್ರೀಂಕೋರ್ಟ್, ಆ ಅವಧಿಯಲ್ಲಿ ಮಾರಾಟವಾದ ವಾಹನಗಳ ನೋಂದಣಿ ಮಾಡದಂತೆ ನಿರ್ದೇಶನ ನೀಡಿದೆ.

ಇದರಿಂದಾಗಿ ನ್ಯಾಯಾಲಯ ಹಿಂಪಡೆದಿರುವ ಅವಧಿಯಲ್ಲಿ ವಾಹನಗಳನ್ನು ಖರೀದಿಸಿದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಮೊದಲ ಲಾಕ್​ಡೌನ್ ಅವಧಿಯ ನಂತರ 10 ಹೆಚ್ಚುವರಿ ದಿನಗಳ ಕಾಲ ಬಿಎಸ್-4 ವಾಹನಗಳ ಮಾರಾಟಕ್ಕೆ ವಾಹನ ವರ್ತಕರು ಅನುಮತಿ ಕೋರಿದ್ದನ್ನು ಸವೋಚ್ಚ ನ್ಯಾಯಾಲಯ ಮಾನ್ಯ ಮಾಡಿತ್ತು. ಆದರೆ ಲಾಕ್​ಡೌನ್ ಅವಧಿಯಲ್ಲಿ ಮಾ. 31ರವರೆಗೂ ಹಲವು ವಾಹನಗಳನ್ನು ಮಾರಾಟ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಮೂಲಕ ವಾಹನ ವ್ಯಾಪಾರಿಗಳು ಕೋರ್ಟ್ ಆದೇಶಕ್ಕೆ ‘ವಂಚನೆ’ ಎಸಗಿದ್ದಾರೆಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಲಾಕ್​ಡೌನ್ ಅವಧಿಯಲ್ಲಿ ವಾಹನಗಳನ್ನು ಮಾರಾಟ ಮಾಡಿದ್ದು ಲಾಕ್​ಡೌನ್ ನಿಯಮಗಳ ಉಲ್ಲಂಘನೆ ಮಾತ್ರವೇ ಅಲ್ಲ, ಕೋರ್ಟ್ ಆದೇಶದ ಉಲ್ಲಂಘನೆಯೂ ಆಗಿದೆ ಎಂದು ಪೀಠ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net