

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೂರು ಬೋಟುಗಳಿಗೆ ಬೃಹತ್ ಗಾತ್ರದ ಎರಡು ಬಾಯಿಯ ನಾಲ್ಕು ತೊರಕೆ ಮೀನುಗಳು ಸಿಕ್ಕಿವೆ.
ಇಂಗ್ಲಿಷ್ನಲ್ಲಿ ಸ್ಟಿಂಗ್ ರೇ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದಕ್ಕಿಂತ ದೊಡ್ಡ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿದ್ದರೂ, ಈ ವರ್ಷದ ಮೀನುಗಾರಿಕಾ ಋತುವಿನಲ್ಲಿ ಮೊದಲ ಬಾರಿಗೆ ಅತೀ ದೊಡ್ಡ ಮೀನು ದೊರೆತಿದೆ. ಬೋಟಿನಿಂದ ಮೀನುಗಳನ್ನು ಬಂದರಿಗೆ ಇಳಿಸುವ ಕಾರ್ಯಾಚರಣೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.