ಅಮೃತ್ ನೋನಿ ಪೇನ್ ಆಯಿಲ್ ನಾಳೆ ಮಾರುಕಟ್ಟೆಗೆ..

Sudeep
Published on

ಬೆಂಗಳೂರು: ಅಮೃತ್ ನೋನಿ ಪೇನ್ ಆಯಿಲ್ ಅನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿನಯ ಚಕ್ರವರ್ತಿ ಸುದೀಪ್ ಅವರು ನಾಳೆ ಸಂಜೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ಫಾಸ್ಟ್ ಆ್ಯಕ್ಷನ್​ ಪೇನ್ ರಿಲೀವಿಂಗ್ ಆಯಿಲ್ ಎಂಬ ಘೋಷಣೆಯೊಂದಿಗೆ ಅಮೃತ್ ನೋನಿ ಪೇನ್ ಆಯಿಲ್ ಗ್ರಾಹಕರಿಗೆ ಪರಿಚಯಿಸಲ್ಪಡುತ್ತಿದೆ.

ನಾಳೆ ಸಂಜೆ 7 ಗಂಟೆಗೆ ಬೆಂಗಳೂರಿನ ದ ರಿಟ್ಝ್ ಕಾರ್ಲ್ಟನ್ ನಲ್ಲಿ ಅಮೃತ್ ನೋನಿ ಪೇನ್ ಆಯಿಲ್ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಅಮೃತ್ ನೋನಿಯ ಫೇಸ್​ಬುಕ್​ ಪುಟದಲ್ಲಿ ಇದರ ನೇರ ಪ್ರಸಾರ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net