ಕಾವ್ಯ-ಅನಿರುದ್ಧ್ ಮದ್ವೆ ಗ್ರೀಸ್‌ನಲ್ಲೇ ಏಕೆ? ರೋಮ್ಯಾಂಟಿಕ್ ಡೆಸ್ಟಿನೇಷನ್ ಆಯ್ಕೆ ಹಿಂದಿದೆ ಅಚ್ಚರಿಯ ಲೆಕ್ಕಾಚಾರ! Anirudh Ravichander Kavya Maran Wedding

Anirudh Ravichander Kavya Maran Wedding
ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್
Published on: 

ಚೆನ್ನೈ: ಭಾರತೀಯ ಚಿತ್ರರಂಗದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್ ಸಪ್ತಪದಿ ( Anirudh Ravichander Kavya Maran Wedding ) ತುಳಿಯಲು ಸಜ್ಜಾಗಿದ್ದಾರೆ. ಈ ತಾರಾ ಜೋಡಿಯ ಅದ್ಧೂರಿ ವಿವಾಹ ಮಹೋತ್ಸವವು ಇಂದು ಐತಿಹಾಸಿಕ ಮತ್ತು ನಿಸರ್ಗ ರಮಣೀಯ ದೇಶವಾದ ಗ್ರೀಸ್‌ನಲ್ಲಿ ನೆರವೇರಲಿದೆ.

ಈಗಾಗಲೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಗ್ರೀಸ್‌ಗೆ ಪ್ರಯಾಣ ಬೆಳೆಸಿರುವ ಫೋಟೋಗಳು ವೈರಲ್ ಆಗಿದ್ದು, ಮದುವೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ. ಗ್ರೀಸ್‌ನ ಏಜಿಯನ್ ಸಮುದ್ರದಲ್ಲಿರುವ ಸುಂದರ ದ್ವೀಪವೊಂದರಲ್ಲಿ ಈ ವಿವಾಹ ಸಮಾರಂಭ ನಡೆಯಲಿದ್ದು, ಈ ಜೋಡಿ ತಮ್ಮ ಜೀವನದ ಪ್ರಮುಖ ಘಟ್ಟಕ್ಕೆ ಸಾಕ್ಷಿಯಾಗಲು ಈ ವಿದೇಶಿ ತಾಣವನ್ನೇ ಏಕೆ ಆರಿಸಿಕೊಂಡರು ಎಂಬ ಕುತೂಹಲಕ್ಕೆ ಹಲವು ಆಕರ್ಷಕ ಕಾರಣಗಳಿವೆ.

Also Read
ಮಾದಕ ಫೋಟೋಗಳನ್ನು ಹರಿಬಿಟ್ಟು ನಶೆಯೇರಿಸಿದ ದಿಶಾ: ಬಾಲಿವುಡ್​ ಬ್ಯೂಟಿಯ ಬೋಲ್ಡ್​ ಲುಕ್​ ವೈರಲ್​! Disha Patani
Anirudh Ravichander Kavya Maran Wedding

ಅನಿರುದ್ಧ್ ಮತ್ತು ಕಾವ್ಯ ಮಾರನ್ ಗ್ರೀಸ್ ಅನ್ನು ತಮ್ಮ ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಅಲ್ಲಿನ ಆಹ್ಲಾದಕರ ಹವಾಮಾನ. ಗ್ರೀಸ್ ದೇಶವು ಮೆಡಿಟರೇನಿಯನ್ ಹವಾಮಾನವನ್ನು ಹೊಂದಿದ್ದು, ವರ್ಷಕ್ಕೆ ಸುಮಾರು 300 ದಿನಗಳ ಕಾಲ ಇಲ್ಲಿ ಸೂರ್ಯನ ಬೆಳಕು ಇರುತ್ತದೆ. ಇದು ಹೊರಾಂಗಣ ವಿವಾಹ ಸಮಾರಂಭಗಳಿಗೆ ಅತ್ಯಂತ ಸೂಕ್ತವಾದ ವಾತಾವರಣವನ್ನು ಕಲ್ಪಿಸುತ್ತದೆ.

ಅಲ್ಲದೆ, ನೀಲಿ ಆಕಾಶ ಮತ್ತು ಪ್ರಕೃತಿಯ ನೈಸರ್ಗಿಕ ಸೌಂದರ್ಯವು ವಿವಾಹದ ಸಂಭ್ರಮವನ್ನು ಇಮ್ಮಡಿಗೊಳಿಸುವುದಲ್ಲದೆ, ಮದುವೆಯ ಫೋಟೋಗಳಿಗೆ ದೈವಿಕ ಸ್ಪರ್ಶ ನೀಡುತ್ತದೆ. ಕಣ್ಮನ ಸೆಳೆಯುವ ಇಲ್ಲಿನ ಭೂದೃಶ್ಯಗಳು ಮತ್ತು ಸದಾ ಬೆಳಗುವ ಸೂರ್ಯನ ಕಿರಣಗಳು ಮದುವೆಯ ಪ್ರತಿಯೊಂದು ಕ್ಷಣವನ್ನೂ ಸ್ಮರಣೀಯವಾಗಿಸಬಲ್ಲವು ಎಂಬುದು ಈ ಜೋಡಿಯ ಆಲೋಚನೆಯಾಗಿದೆ.

ಇನ್ನು, ಮದುವೆಯ ಫೋಟೋಶೂಟ್‌ಗಳಿಗೆ ಗ್ರೀಸ್ ಅತ್ಯಂತ ನೆಚ್ಚಿನ ತಾಣವಾಗಿದೆ. ಇಲ್ಲಿನ ಕರಾವಳಿ ತೀರಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಚೀನ ನಗರಗಳು ಫೋಟೋಗ್ರಫಿಗೆ ಅದ್ಭುತ ಹಿನ್ನೆಲೆಯನ್ನು ಒದಗಿಸುತ್ತವೆ. ಮದುವೆಯ ನೆನಪುಗಳನ್ನು ಜೀವಂತವಾಗಿರಿಸಲು ಮತ್ತು ಜಗತ್ತಿನ ಗಮನ ಸೆಳೆಯುವಂತಹ ಫೋಟೋಗಳನ್ನು ಪಡೆಯಲು ಈ ತಾಣಕ್ಕಿಂತ ಉತ್ತಮವಾದ ಸ್ಥಳವಿಲ್ಲ ಎನ್ನಬಹುದು.

ಇದರೊಂದಿಗೆ, ಗ್ರೀಕ್ ಜನರ ಆತಿಥ್ಯವೂ ಕೂಡ ವಿಶ್ವಪ್ರಸಿದ್ಧವಾಗಿದೆ. ಅವರ ಸಂಸ್ಕೃತಿಯಲ್ಲಿರುವ 'ಫಿಲೋಕ್ಸೆನಿಯಾ' (ಅಪರಿಚಿತರಿಗೆ ಗೆಳೆತನ ತೋರುವುದು) ಎಂಬ ಪರಿಕಲ್ಪನೆಯು ಪ್ರವಾಸಿಗರನ್ನು ಮತ್ತು ಮದುವೆಗೆ ಆಗಮಿಸುವ ಅತಿಥಿಗಳನ್ನು ವಿಶೇಷವಾಗಿ ಉಪಚರಿಸುತ್ತದೆ. ಈ ಜೋಡಿ ಮತ್ತು ಅವರ ಗಣ್ಯ ಅತಿಥಿಗಳು ಗ್ರೀಕ್ ಜನರ ಆತ್ಮೀಯ ಆತಿಥ್ಯವನ್ನು ಸವಿಯಲಿದ್ದಾರೆ.

Also Read
ಸೌತ್​ ಬ್ಯೂಟಿ ನಯನತಾರಾಗೆ ಈ ರೀತಿ ಆಗಬಾರದಿತ್ತು... ಲೇಡಿ ಸೂಪರ್ ಸ್ಟಾರ್​ಗೆ ಸಾಲು ಸಾಲು ಆಘಾತ! Nayanthara
Anirudh Ravichander Kavya Maran Wedding

ಕೊನೆಯದಾಗಿ, ಗ್ರೀಕ್ ಆಹಾರ ಪದಾರ್ಥಗಳು ಮದುವೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿವೆ. ಗ್ರೀಸ್ ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಯ ವೈವಿಧ್ಯಮಯ ಮೀನು ಮತ್ತು ಮಾಂಸದ ಭಕ್ಷ್ಯಗಳಿಗೆ ಪ್ರಸಿದ್ಧಿಯಾಗಿದೆ. ಇದರ ಜತೆಗೆ, ಇಲ್ಲಿನ ಅತ್ಯುತ್ತಮ ವೈನ್ ಮತ್ತು ಮದ್ಯಗಳು ಮದುವೆಯ ಔತಣಕೂಟಕ್ಕೆ ವಿಶೇಷ ಮೆರುಗು ನೀಡಲಿವೆ. ಲೋಕಲ್ ತಳಿಯ ದ್ರಾಕ್ಷಿಗಳಿಂದ ತಯಾರಿಸಿದ 'ವಿಡಿಯಾನೋ' ಮತ್ತು 'ಮೊಸ್ಕಾಟೊ ಸ್ಪಿನಾಸ್' ವೈನ್‌ಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದು, ಇವುಗಳೊಂದಿಗೆ ಸಾಂಪ್ರದಾಯಿಕ ಪಾನೀಯಗಳಾದ 'ಊಜೋ' ಮತ್ತು 'ಮಾಸ್ಟಿಹಾ' ಅತಿಥಿಗಳಿಗೆ ಗ್ರೀಕ್ ಸಂಸ್ಕೃತಿಯ ಪರಿಚಯ ಮಾಡಿಕೊಡಲಿವೆ.

ಈ ಎಲ್ಲಾ ಕಾರಣಗಳಿಂದಾಗಿ, ಅನಿರುದ್ಧ್ ಮತ್ತು ಕಾವ್ಯ ಮಾರನ್ ದಂಪತಿ ಗ್ರೀಸ್ ಅನ್ನು ತಮ್ಮ ಮದುವೆಗೆ ಸೂಕ್ತವಾದ ಸ್ಥಳವೆಂದು ಆರಿಸಿಕೊಂಡಿದ್ದಾರೆ ಎಂದು ಅನೇಕ ವರದಿಗಳು ಹೇಳಿವೆ, (ಏಜೆನ್ಸೀಸ್​).