46 ಕೋಟಿ ಚೆಕ್ ವಂಚನೆ ಆರೋಪ: ಹಿರಿಯ ನಟಿ ಅಂಬಿಕಾ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿದ ಸಹೋದರಿ ರಾಧಾ! Actress Ambika

ಹಿರಿಯ ನಟಿ ಅಂಬಿಕಾ (Actress Ambika) ವಿರುದ್ಧ ಸಹೋದರಿ ರಾಧಾ 46 ಕೋಟಿ ರೂ. ಚೆಕ್ ವಂಚನೆ ಮತ್ತು ಕಳ್ಳತನ ದೂರು ದಾಖಲು. ಚೆಸ್‌ ದುರ್ಬಳಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Veteran actresses Ambika and Radha
ಹಿರಿಯ ನಟಿಯರಾದ ಅಂಬಿಕಾ ಮತ್ತು ರಾಧಾ
Published on

ಚೆನ್ನೈ: ದಕ್ಷಿಣ ಭಾರತದ ಹಿರಿಯ ನಟಿ ಅಂಬಿಕಾ (Actress Ambika) ಹಾಗೂ ಸಹೋದರ ಮಲ್ಲಿಕಾರ್ಜುನ್​ ವಿರುದ್ಧ ಕಿರಿಯ ಸಹೋದರಿ ಹಾಗೂ ನಟಿ ರಾಧಾ ಆರ್ಥಿಕ ವಂಚನೆ ಪ್ರಕರಣವೊಂದನ್ನು ದಾಖಲಿಸಿದ್ದಾರೆಂದು ವರದಿಯಾಗಿದೆ.

ಮಾಹಿತಿ ಪ್ರಕಾರ, ನಟಿ ರಾಧಾ ಸಹಿ ಮಾಡಿದ್ದ ಖಾಲಿ ಚೆಕ್​ (ಬ್ಲ್ಯಾಂಕ್​ ಚೆಕ್​) ಅನ್ನು ಸಹೋದರಿ ಅಂಬಿಕಾ ಹಾಗೂ ಸಹೋದರ ಮಲ್ಲಿಕಾರ್ಜುನ್​ ನಾಯರ್​​, ರಾಧಾಳ ಗಮನಕ್ಕೆ ಬರದಂತೆ ಆ ಚೆಕ್​ ಅನ್ನು ಕಳ್ಳತನ ಮಾಡಿ ಸುಮಾರು 46 ಕೋಟಿ ರೂಪಾಯಿಗಳನ್ನು ಪಡೆಯಲು ಯತ್ನಿಸಿದ್ದರೆಂದು ನಟಿ ಗ್ರೇಟರ್​ ಚೆನ್ನೈ ಪೊಲೀಸ್​ ಆಯುಕ್ತರಲ್ಲಿ ದೂರನ್ನು ಸಲ್ಲಿಸಿದ್ದಾರೆ.

Also Read
ನಾವೀಗ ಮೂವರು... ಮದ್ವೆ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರಾ ರಶ್ಮಿಕಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತೇನು? Rashmika Mandanna
Veteran actresses Ambika and Radha

ದೂರಿನಲ್ಲೇನಿದೆ?

ನಟಿ ರಾಧಾ ನೀಡಿರುವ ದೂರಿನಲ್ಲಿ, ನಾನು, ನನ್ನ ವ್ಯವಹಾರವನ್ನು ನಡೆಸಲು ಐಡಿಬಿಐ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದೆನೆ. ಇದು ನನ್ನ ವ್ಯವಹಾರಿಕ ಬ್ಯಾಂಕ್​ ಖಾತೆಯಾಗಿದ್ದು, ಇದರಲ್ಲಿರು ಹಣವನ್ನು ನಾನು ನನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲು, ತೆರಿಕೆ ಕಟ್ಟಲು ಹಾಗೂ ಗಾರ್ಡ್​ನ್​ ನಿರ್ವಹಣೆಗೆ ಹೆಚ್ಚಿನದಾಗಿ ಬಳಸುತ್ತೇನೆ.

ನಾನು ಎಲ್ಲಿಗಾದರೂ ಪ್ರವಾಸಕ್ಕೆ ಹೋದಾಗ ಖರ್ಚಿಗೆ ಹಾಗೂ ನಿರ್ವಹಣೆ ಮಾಡುವವರಿಗೆ ಸಂಬಳ ನೀಡುವ ಉದ್ದೇಶದಿಂದ ಕೆಲ ಚೆಕ್​ಗಳಿಗೆ ಮುಂಚಿತವಾಗಿ ಸಹಿ ಮಾಡಿ ಇಡುತ್ತೇನೆ. ಆದರೆ 2025 ರಲ್ಲಿ ನನ್ನ ಕಂಪನಿ ಹೆಸರು ಎಆರ್​ಎಸ್​ ಗಾರ್ಡನ್ಸ್ ನಿಂದ ಆರ್​ಆರ್​ ಗಾರ್ಡನ್ಸ್ ಎಂದು ಬದಲಾದ ನಂತರ ಹೊಸ ಬ್ಯಾಂಕ್ ಖಾತೆ ಹಾಗೂ ಹೊಸ ಚೆಕ್​ ಪುಸ್ತಕ ಪಡೆದ ಹಿನ್ನಲೆ, ಈ ಹಳೆಯ ಚೆಕ್​ಗಳ ಬಗ್ಗೆ ನಾನು ಮರೆತು ಹೋಗಿದ್ದೆ.

ಆದರೆ ಸೆಪ್ಟೆಂಬರ್​ 17 ರಂದು ಬ್ಯಾಂಕ್​ನಿಂದ ನನಗೆ ಕರೆ ಬಂದಿದ್ದು, ಅವರು ಹೇಳಿದಂತೆ ನನ್ನ ಹಳೆಯ 5 ಚೆಕ್​ಗಳಲ್ಲಿ ಒಟ್ಟು 46 ಕೋಟಿ ಹಣವನ್ನು ನಮೂದಿಸಿ, ಅದನ್ನು ಅಂಬಿಕಾಳ ಬ್ಯಾಂಕ್​ ಖಾತೆಗೆ ವಾರ್ಗಾಯಿಸುವಂತೆ ಹೇಳಲಾಗುತ್ತಿದೆ ಎಂದಿದ್ದಾರೆ. ಆದರೆ, ನಾನು ಅಂಬಿಕಾಳ ಜೊತೆ ಯಾವುದೇ ಆರ್ಥಿಕ ವ್ಯವಹಾರ ಹೊಂದಿರಲಿಲ್ಲ ಹಾಗೂ ನಾನು ಆ ಚೆಕ್​ ಅನ್ನು ಅವಳಿಗೆ ನೀಡಿರಲಿಲ್ಲ, ಹೀಗಾಗಿ ಯಾವುದೇ ಹಣವನ್ನು ವರ್ಗಾಯಿಸಬೇಡಿ ಎಂದು ಬ್ಯಾಂಕ್​ ಸಿಬ್ಬಂದಿಗಳಿಗೆ ಹೇಳಿದೆ ಎಂದು ರಾಧಾ ತಿಳಿಸಿದ್ದಾರೆ.

Also Read
ಸೌಜನ್ಯ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಮರು ತನಿಖೆಗೆ ಸುಪ್ರೀಂ ಕೋರ್ಟ್​ ಆದೇಶ; 3 ತಿಂಗಳಲ್ಲಿ ವರದಿ ಸಲ್ಲಿಸಲು ಗಡುವು! Sowjanya Case
Veteran actresses Ambika and Radha

ಅಂಬಿಕಾ-ಮಲ್ಲಿಕಾರ್ಜುನ್ ವಿರುದ್ಧ ದೂರು

ಪಿತ್ರಾರ್ಜಿತ ಆಸ್ತಿ ವಿಚಾರದ ಸಂಬಂಧ ಅಕ್ಕ-ತಂಗಿಯ ನಡುವೆ ಮನಃಸ್ಥಾಪವಿದ್ದು, ಈಗ ಈ ಚೆಕ್​ ಕಳ್ಳತನ ಪ್ರಕರಣ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ. ನಟಿ ರಾಧಾ ಹೇಳುವಂತೆ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ತಾವು ಚೆನ್ನೈನಿಂದ ದೂರ ಹೋಗಿದ್ದ ಸಂದರ್ಭದಲ್ಲಿ ಸಹೋದರಿ ಅಂಬಿಕಾ ಹಾಗೂ ಸಹೋದರ ಮಲ್ಲಿಕಾರ್ಜುನ್ ಸೇರಿಕೊಂಡು, ತನ್ನ ಕೋಣೆಯನ್ನು ಅಕ್ರಮವಾಗಿ ಪ್ರವೇಶಿಸಿ, ಖಾಲಿ ಚೆಕ್​ಗಳನ್ನು ಕಳ್ಳತನ ಮಾಡಿ, ತಮಗೆ ಆರ್ಥಿಕ ವಂಚನೆ ಮಾಡಲು ಮುಂದಾಗಿದ್ದಾರೆಂದು ಹೇಳಿದ್ದಾರೆ.

ಈ ಘಟನೆ ನನ್ನ ಗಮನಕ್ಕೆ ಬರುತ್ತಲೇ, ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ನಟಿ ರಾಧಾ ತಾವು ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆಂದು ತಿಳಿದು ಬಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net