ನಾವೀಗ ಮೂವರು... ಮದ್ವೆ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರಾ ರಶ್ಮಿಕಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತೇನು? Rashmika Mandanna

ನಾವೀಗ ಮೂವರು... ಮದ್ವೆ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರಾ ರಶ್ಮಿಕಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತೇನು? Rashmika Mandanna
ನಾವೀಗ ಮೂವರು... ಮದ್ವೆ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರಾ ರಶ್ಮಿಕಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತೇನು? Rashmika Mandanna
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಸಿನಿರಂಗದ ಫೇಮಸ್​​ ತಾರಾ ದಂಪತಿ
  • ಮದುವೆ ಬಳಿಕ ಹನಿಮೂನ್​ ಪ್ರವಾಸ ಮಾಡಿ ತವರಿಗೆ ಮರಳಿದ್ದು ಮತ್ತೆ ಸಿನಿಮಾಗಳಲ್ಲಿ ಈ ಜೋಡಿ ಬಿಜಿಯಾಗಿದೆ
  • ಇದೀಗ ರಶ್ಮಿಕಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಭಾರಿ ಸಂಚಲನ ಮೂಡಿಸುತ್ತಿದೆ
  • ಗರ್ಭಿಣಿಯಾದ್ರಾ ರಶ್ಮಿಕಾ? ವೈರಲ್​ ವಿಡಿಯೋ ಹಿಂದಿನ ಅಸಲಿ ಸಂಗತಿ ಇಲ್ಲಿದೆ ನೋಡಿ
Rashmika Mandanna : ಟಾಲಿವುಡ್​ ತಾರಾ ದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಫೆ.26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಮದುವೆ ಬಳಿಕ ಹನಿಮೂನ್​ ಪ್ರವಾಸ ಮಾಡಿ, ಇದೀಗ ಈ ಜೋಡಿ ತವರಿಗೆ ಮರಳಿದ್ದು, ಮತ್ತೆ ಸಿನಿಮಾಗಳಲ್ಲಿ ಬಿಜಿಯಾಗಿದೆ. ಇದರ ನಡುವೆ ರಶ್ಮಿಕಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಭಾರಿ ಸಂಚಲನ ಮೂಡಿಸುತ್ತಿದೆ. 
ಈಗ ನಾವು ಮೂವರು ಎಂದು ಹೇಳುವ ಸಣ್ಣ ಅನಿಮೇಟೆಡ್ ವಿಡಿಯೋ ತುಣುಕನ್ನು ರಶ್ಮಿಕಾ ಅವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಅನಿಮೇಟೆಡ್​ ಚಿತ್ರದೊಂದಿಗೆ ಸೂರ್ಯಕಾಂತಿಯ ಚಿತ್ರವೂ ಇದೆ. ರಶ್ಮಿಕಾ ಅವರ ಟಿ-ಶರ್ಟ್‌ನಲ್ಲಿ ಒಂದು ಮೊಟ್ಟೆಯ ಚಿತ್ರವೂ ಇದೆ. 
ಇನ್ನು ವಿಡಿಯೋ ನೋಡಿದವರು ನಾನಾ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರಂತೂ ರಶ್ಮಿಕಾ ಮಂದಣ್ಣ ಗರ್ಭಿಣಿಯಾಗಿದ್ದಾರೆ ಮತ್ತು ಶೀಘ್ರದಲ್ಲೇ ತಾಯಿಯಾಗುತ್ತಾರೆ. ಅದರ ಸುಳಿವನ್ನು ವಿಡಿಯೋದಲ್ಲಿ ನೀಡಿದ್ದಾರೆ ಅಂತ ಕಾಮೆಂಟ್​ ಮಾಡುತ್ತಿದ್ದಾರೆ. ಮದುವೆಯಾದ ಒಂದೇ ತಿಂಗಳೊಳಗೆ ಒಳ್ಳೆಯ ಸುದ್ದಿ ಹೇಳುತ್ತಿದ್ದಾರೆ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಅಸಲಿ ಸುದ್ದಿ ಬೇರೇನೆ ಇದೆ. ಅದೇನೆಂದು ನಾವೀಗ ತಿಳಿಯೋಣ.

ಅಸಲಿ ಸಂಗತಿ ಇದು

ರಶ್ಮಿಕಾ ಹಂಚಿಕೊಂಡಿರುವ ವಿಡಿಯೋ ಅಸಲಿ ಸತ್ಯವೇನೆಂದರೆ ರಶ್ಮಿಕಾ ಅವರು ಸೂರ್ಯಕಾಂತಿಯನ್ನು ತನ್ನ ಆಪ್ತ ಸ್ನೇಹಿತೆ ಎಂದು ಪರಿಗಣಿಸುತ್ತಾರೆ. ಅದಕ್ಕಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (ರಶ್ಮಿಕಾರು) ವಿಶೇಷ ಖಾತೆಯನ್ನು ಸಹ ರಚಿಸಿದ್ದಾರೆ. ಅದರಲ್ಲಿ, ಅವರು ಹೂವಿನೊಂದಿಗಿನ ತಮ್ಮ ಸಿಹಿ ಕ್ಷಣಗಳು ಮತ್ತು ಕಥೆಗಳನ್ನು ಅನಿಮೇಟೆಡ್ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಈಗ, ಅವರು ವಿಜಯ್ ಅವರನ್ನು ಈ ಅನಿಮೇಷನ್ ಜಗತ್ತಿಗೆ ಆಹ್ವಾನಿಸುವ ಈ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ನಾವೀಗ ಮೂವರು ಎಂದಿದ್ದಾರೆ. 
ಅಂದಹಾಗೆ, ರಶ್ಮಿಕಾ ಮತ್ತು ರೂ (Rashmika & Ru) ಎಂಬುದು 'ಟೆರಿಬ್ಲಿ ಟೈನಿ ಟೇಲ್ಸ್' (TTT) ಸಂಸ್ಥೆಯು ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೂಡಿ ಸಿದ್ಧಪಡಿಸಿದ ಒಂದು ವಿಶೇಷ ಸರಣಿ. ರಶ್ಮಿಕಾ ಅವರ ಸದಾ ಹಸನ್ಮುಖಿ ಮತ್ತು ದಯಾಪರ ವ್ಯಕ್ತಿತ್ವವನ್ನೇ ಆಧಾರವಾಗಿಟ್ಟುಕೊಂಡು ಈ 'ರೂ' (Ru) ಎಂಬ ಪಾತ್ರವನ್ನು ಸೃಷ್ಟಿಸಲಾಗಿದೆ. ಜನರ ಜೀವನದಲ್ಲಿ ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹರಡುವುದು ಈ ಪಾತ್ರದ ಮುಖ್ಯ ಉದ್ದೇಶವಾಗಿದೆ. ಸರಳವಾಗಿ ಹೇಳಬೇಕೆಂದರೆ, ರಶ್ಮಿಕಾ ಅವರ ನೈಜ ಗುಣಗಳ ಪ್ರತಿಬಿಂಬದಂತಿರುವ ಈ ಪಾತ್ರವು ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ನೆಮ್ಮದಿ ಮತ್ತು ನಗು ನೀಡುವ ಒಂದು ಪುಟ್ಟ ಪ್ರಯತ್ನವಾಗಿದೆ.
ರಶ್ಮಿಕಾ ಮತ್ತು ರೂ ಸರಣಿಯ ಹೊಸ ಪೋಸ್ಟ್‌ನಲ್ಲಿ ಅನಿಮೇಟೆಡ್ ಜಗತ್ತನ್ನು ತೋರಿಸಲಾಗಿದ್ದು, ಇದರಲ್ಲಿ ನಟ ವಿಜಯ್ ದೇವರಕೊಂಡ ಕೂಡ ಭಾಗಿಯಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಸಹಯೋಗವು ಈ ಸರಣಿಗೆ ಮತ್ತಷ್ಟು ಆಪ್ತವಾದ ಮತ್ತು ಮನಮುಟ್ಟುವಂತಹ ಕಳೆಯನ್ನು ನೀಡಿದೆ ಎಂದು ನೆಟ್ಟಿಗರು ಭಾವಿಸುತ್ತಿದ್ದಾರೆ. ವಿಜಯ್ ಅವರ ಎಂಟ್ರಿಯಿಂದಾಗಿ ಈ ಜೋಡಿಯ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದು, ಈ ಬದಲಾವಣೆಯನ್ನು ಅತ್ಯಂತ 'ಕ್ಯೂಟ್' ಮತ್ತು ಪಾಸಿಟಿವಿಟಿ ಎಂದು ಬಣ್ಣಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net