ಕಾಲೇಜು ಪಕ್ಕದ ಕಾಫಿ ಶಾಪ್​ ಒಳಗೆ ಹೋದವರಿಗೆ ಕಾದಿತ್ತು ಶಾಕ್​! ಕೆಫೆ ಒಳಗಿನ ವಿದ್ಯಾರ್ಥಿಗಳ ರಹಸ್ಯ ಬಯಲು | Coffee Shop

Coffee Shop
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ಮಾಡಬಾರದ ಕೆಟ್ಟ ಕೆಲಸಗಳನ್ನು ಮಾಡಿ ಪಾಲಕರಿಗೆ ಶಾಕ್ ನೀಡುತ್ತಿದ್ದಾರೆ. ತಮ್ಮ ಜವಾಬ್ದಾರಿಗಳನ್ನು ಮರೆತು, ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಇಂದೋರ್‌ನ ಕಾಫಿ ಶಾಪ್​ ( Coffee Shop ) ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರಣಯದಲ್ಲಿ ತೊಡಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ.

ವೈರಲ್​ ವಿಡಿಯೋದಲ್ಲಿ ಕಾಫಿ ಶಾಪ್​ ಒಳಗೆ ಕೆಲವು ಕೊಠಡಿಗಳಿರುವುದನ್ನು ನೋಡಬಹುದು. ಆ ಕೊಠಡಿ ಒಳಗೆ ಜೋಡಿಗಳು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡಬಂದಿದೆ. ವಿಡಿಯೋ ನೋಡಿ ಪೊಲೀಸರು ಕೂಡ ಶಾಕ್​ ಆಗಿದ್ದಾರೆ. ಇದೀಗ ಆ ಕಾಫಿ ಶಾಪ್ (ಕೆಫೆ) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಲ್ಹಾರಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆಫೆಯೊಂದರ ವಿಡಿಯೋ ಇದಾಗಿದೆ. ಇಲ್ಲಿ ಕೆಲವರು ವಿಡಿಯೋ ಮಾಡುತ್ತಲೇ ಕೆಫೆ ಮೇಲೆ ಏಕಾಏಕಿ ದಾಳಿ ನಡೆಸಲಾರಂಭಿಸಿದರು. ಅಲ್ಲಿನ ದೃಶ್ಯ ನೋಡಿ ಒಂದು ಕ್ಷಣ ಬೆಚ್ಚಿಬೀಳುತ್ತಾರೆ. 50 ಸೆಕೆಂಡುಗಳ ವಿಡಿಯೋದಲ್ಲಿ ಕೆಫೆಯೊಳಗೆ ಅನೇಕ ಕ್ಯಾಬಿನ್‌ಗಳು ಇರುವುದನ್ನು ತೋರಿಸಿದೆ. ಪ್ರತಿ ಕ್ಯಾಬಿನ್ ಹೊರಗೆ ಪರದೆ ಕೂಡ ಇದೆ. ಒಂದೊಂದಾಗಿ ಕರ್ಟನ್ ತೆಗೆದ ಕೂಡಲೇ ಒಳಗೆ ಕುಳಿತಿದ್ದ ಜೋಡಿಗಳು ಒಂದು ಕ್ಷಣ ಭಯಗೊಂಡರು. ಒಳಗಿದ್ದ ಎಲ್ಲ ಹುಡುಗರು ಮತ್ತು ಹುಡುಗಿಯರು ಅರೆಬೆತ್ತಲೆ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ. ಅನೇಕ ಜೋಡಿಗಳು ನಗ್ನರಾಗಿದ್ದರು. ಕೆಲವರು ಕರ್ಟನ್ ತೆಗೆದ ತಕ್ಷಣ ಅವಸರದಲ್ಲಿ ಬಟ್ಟೆ ಧರಿಸತೊಡಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಸದ್ಯ ಈ ವಿಡಿಯೋವನ್ನು ಪೊಲೀಸರಿಗೆ ನೀಡಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಈ ಬಗ್ಗೆ ಡಿಸಿಪಿ ವಿನೋದ್ ಮೀನಾ ಮಾತನಾಡಿ, ಮಲ್ಹಾರಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆಫೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ದೃಶ್ಯ ತುಂಬಾ ಅಶ್ಲೀಲವಾಗಿದೆ. ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಕೆಫೆಯ ಬಗ್ಗೆಯೂ ತನಿಖೆ ನಡೆಸಲಾಗುವುದು. ಕಾಫಿ ಶಾಪ್‌ಗೆ ಭೇಟಿ ನೀಡಿದವರ ವಿವರಗಳನ್ನು ಸರಿಯಾಗಿ ದಾಖಲಿಸಿದ್ದೀರಾ? ಅಥವಾ ಇಲ್ಲವಾ? ಎಂಬುದನ್ನು ಪರಿಶೀಲಿಸುತ್ತೇವೆ. ಇಲ್ಲಿ ಏನಾದರೂ ತಪ್ಪು ನಡೆದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಇದೇ ವೇಳೆ ಕೆಲ ಮಾಧ್ಯಮದವರು ಬಡಾ ಗಣಪತಿ ಮತ್ತು ಆಖಿರಿ ಚೌರಾಹಾ ನಡುವೆ ಇರುವ ಕೆಫೆಗಳಿಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಇಂತಹ ಹಲವು ಕೆಫೆಗಳು ಇರುವುದು ಪತ್ತೆಯಾಗಿದೆ. ಈ ಎಲ್ಲ ಕೆಫೆಗಳಲ್ಲಿ ಪರದೆಯ ಕ್ಯಾಬಿನ್‌ಗಳು ಕಂಡುಬಂದಿವೆ. ಇಲ್ಲಿಯೂ ಅಂಥದ್ದೇ ಘಟನೆಗಳು ನಡೆಯುತ್ತಿರುವುದು ಸ್ಪಷ್ಟವಾಗಿದೆ. ಅನೇಕ ಕೆಫೆಗಳಲ್ಲಿ ಯುವಕರು ಮತ್ತು ಯುವತಿಯರು ಸಹ ಕಾಣಿಸಿಕೊಂಡರು. ಕೆಫೆಗಳ ಸುತ್ತ ವಾಸಿಸುವ ಸ್ಥಳೀಯರು ಕೆಫೆಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಆರೋಪಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಶಾಲಾ-ಕಾಲೇಜುಗಳಿಂದ ಹೆಚ್ಚಿನ ಹುಡುಗ-ಹುಡುಗಿಯರು ಇಲ್ಲಿಗೆ ಬರುತ್ತಾರೆ. ಅವರಿಂದ ಗಂಟೆಗೊಮ್ಮೆ ಹಣ ವಸೂಲಿ ಮಾಡಲಾಗುತ್ತದೆ. ಅದಕ್ಕೆ ಪ್ರತಿಯಾಗಿ ತಪ್ಪು ಕೆಲಸಗಳನ್ನು ಮಾಡಲು ಅನುಮತಿಸಲಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಈ ಕೆಫೆಗಳು ಲವ್ ಜಿಹಾದ್‌ನಂತಹ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಕೆಲವು ಹಿಂದೂ ಸಂಘಟನೆಗಳು ಆರೋಪಿಸಿವೆ.

ಮಲ್ಹಾರಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಡಜನ್ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಜೊತೆಗೆ ಮೂರು ಡಜನ್‌ಗಿಂತಲೂ ಹೆಚ್ಚು ತರಬೇತಿ ಸಂಸ್ಥೆಗಳಿವೆ. ಈ ಕೆಫೆಗಳು ಅನೇಕ ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳ ಬಳಿ ಕಾರ್ಯನಿರ್ವಹಿಸುತ್ತವೆ. ಸದ್ಯ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಕೆಫೆ ನಿರ್ವಾಹಕರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net