ಎಳನೀರು ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ..!

cf
Published on

Benefits of tender coconut water : ಎಳನೀರಿನಲ್ಲಿ ಫೈಬರ್ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನೂ ತಡೆಯುತ್ತದೆ. ಹೆವಿ ಆಹಾರವನ್ನು ಸೇವಿಸಿ ನಂತರ ನೀರು ಅಥವಾ ತೆಂಗಿನ ನೀರು ಕುಡಿದರೆ ಆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಪದೇ ಪದೇ ಜೀರ್ಣಕ್ರಿಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸಹಕಾರಿ.


ಅತ್ಯಂತ ಕಡಿಮೆ ದರದ ನೈಸರ್ಗಿಕ ಪಾನೀಯವೆಂದರೆ ಎಳ ನೀರು. ಈ ಅದ್ಭುತ ಪಾನೀಯವು ದೇಹದ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಉತ್ತಮವಾಗಿದೆ. ಎಳನೀರು ಕುಡಿಯುವುದರಿಂದ ದೇಹ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತದೆ.


ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯ :
ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದೆ. ದೇಹದಲ್ಲಿನ ರಕ್ತದ ಹರಿವು ಮತ್ತು ಇತರ ಬದಲಾವಣೆಗಳನ್ನು ಹೆಚ್ಚಿಸಲು ನೀರು ಸಹಾಯ ಮಾಡುತ್ತದೆ. ಇದನ್ನು ಎಲೆಕ್ಟ್ರೋಲೈಟ್‌ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಎಲೆಕ್ಟ್ರೋಲೈಟ್‌ಗಳನ್ನು ಹೆಚ್ಚಿಸಲು ಸಹಾಯ ಮಾಡುವ ಪಾನೀಯಗಳಲ್ಲಿ ಒಂದು ಎಳನೀರು. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಅಗತ್ಯ ಖನಿಜಗಳನ್ನು ಹೊಂದಿರುತ್ತದೆ. ಇದು ಬೆವರಿನ ಮೂಲಕ ಕಳೆದುಹೋದ ಎಲೆಕ್ಟ್ರೋಲೈಟ್‌ ಗಳನ್ನು ಮತ್ತೆ ದೇಹಕ್ಕೆ ನೀಡುತ್ತದೆ.


ಎಳನೀರಿಗೆ ದೇಹದಲ್ಲಿರುವ ಜೀವಕೋಶಗಳನ್ನು ರಕ್ಷಿಸುವ ಶಕ್ತಿ ಇರುವುದರಿಂದ ದೇಹದ ಅಂಗಾಂಗಗಳ ರಕ್ಷಣೆಗೆ ಸಹಕಾರಿಯಾಗುತ್ತದೆ. ಎಳನೀರು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ದೀರ್ಘಕಾಲದ ಕಾಯಿಲೆಗಳಾದ ಕ್ಯಾನ್ಸರ್, ಆಲ್ಝೈಮರ್ಸ್, ಹೃದ್ರೋಗ ಮತ್ತು ಪಾರ್ಶ್ವವಾಯುಗಳನ್ನು ತಪ್ಪಿಸಲು ಎಳನೀರು ಕುಡಿಯಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net