More

    ಹಲವು ಜಾನರ್​ಗಳ ಮಿಶ್ರಣವಿರುವ ‘ಕಾಕ್ಟೈಲ್​’ ಚಿತ್ರದ ಟ್ರೈಲರ್​ ಬಿಡುಗಡೆ …

    ಬೆಂಗಳೂರು: ಪುನೀತ್​ ಇದ್ದಿದ್ದರೆ ಖಂಡಿತಾ ಅವರೇ ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಟ್ರೈಲರ್​ ಬಿಡುಗಡೆ ಮಾಡುತ್ತಿದ್ದರಂತೆ. ಆದರೆ, ಅವರಿಲ್ಲದ ಕಾರಣ, ಅವರ ಜಾಗವನ್ನು ತುಂಬಿದವರು ಅಶ್ವಿನಿ ಪುನೀತ್​ ರಾಜಕುಮಾರ್​. ‘ಕಾಕ್ಟೈಲ್​’ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಇದನ್ನೂ ಓದಿ: ಹೊಸ ವರ್ಷಕ್ಕೆ ‘ಡ್ಯಾಶ್’ ಹಾಡಿನ ಜತೆ ಬಂದ ಚಂದನ್​ ಶೆಟ್ಟಿ …

    ವಿಜಯಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಡಾ.ಶಿವಪ್ಪ ನಿರ್ಮಿಸಿರುವ ಹಾಗೂ ಶ್ರೀರಾಮ್ ನಿರ್ದೇಶಿಸಿರುವ ‘ಕಾಕ್ಟೈಲ್’ ಚಿತ್ರವು ಜನವರಿ ಮೊದಲ ವಾರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಟ್ರೈಲರ್​ ಬಿಡುಗಡೆಯಾಗಿದೆ.

    ಪುನೀತ್​ ರಾಜಕುಮಾರ್​ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ನಿರ್ಮಾಪಕ ಶಿವಪ್ಪ, ‘ನನ್ನ ಮಗನನ್ನು ನಾಯಕನನ್ನಾಗಿ ಮಾಡುವುದಿಂದ ಹಿಡಿದು, ನಮ್ಮ ಚಿತ್ರದ ಕುರಿತಾದ ಎಲ್ಲಾ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳುತ್ತಿದ್ದೆ. ಅವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಧೈರ್ಯ ತುಂಬುತ್ತಿದ್ದರು. ಚಿತ್ರ ಬಿಡುಗಡೆಯ ಹೊತ್ತಿಗೆ ಅವರಿಲ್ಲದುರುವುದು ತುಂಬಾ ದುಃಖವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುವುದರ ಜತೆಗೆ, ಟ್ರೈಲರ್​ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದಗಳನ್ನು ಸಮರ್ಮಿಸಿದ್ದಾರೆ.

    ಈ ಚಿತ್ರವನ್ನು ಶ್ರೀರಾಮ್​ ನಿರ್ದೇಶಿಸಿದ್ದಾರೆ. ‘ಕಾಕ್ಟೈಲ್​’ ಎಂದರೇನು ಎಂದು ವಿವರಣೆ ನೀಡಿದ ಅವರು, ‘ಈ ಚಿತ್ರದಲ್ಲಿ ಲವ್, ಹಾರಾರ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್​ ಎಲ್ಲವೂ ಇದೆ. ಯಾವುದೇ ಒಂದು ಜಾನರ್​ಗೆ ಸೀಮಿತವಾಗದೆ, ಹಲವು ಜಾನರ್​ಗಳು ಇರುವುದರಿಂದ ಚಿತ್ರಕ್ಕೆ ‘ಕಾಕ್ಟೈಲ್​’ ಎಂಬ ಹೆಸರನ್ನು ಇಟ್ಟಿದ್ದೇವೆ. ಚಿತ್ರದಲ್ಲಿ ನಿವೃತ್ತ ಐ ಎ ಎಸ್ ಅಧಿಕಾರಿಯಾಗಿರುವ ನಿರ್ಮಾಪಕ ಡಾ. ಶಿವಪ್ಪ ಅವರ ಮಗ ವೀರೇನ್ ಕೇಶವ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರ ಜನವರಿ 6ಕ್ಕೆ ಬಿಡುಗಡೆಯಾಗಲಿದ್ದು, ಜನರ ಪ್ರೋತ್ಸಾಹ ಸಿಕ್ಕರೆ, ಮುಂದಿನ ದಿನಗಳಲ್ಲಿ ಮುಂದುವರೆದ ಭಾಗ ಮಾಡುತ್ತೇವೆ’ ಎಂದು ಘೋಷಿಸಿದರು.

    ಇದನ್ನೂ ಓದಿ: ಜುಲಾನ್​ ಗೋಸ್ವಾಮಿ ಬಯೋಪಿಕ್​ ಮುಗಿಸಿದ ಅನುಷ್ಕಾ …

    ಇಲ್ಲಿ ವೀರೇನ್​ ಕೇಶವ್​ಗೆ ನಾಯಕಿಯಾಗಿ ಚರಿಶ್ಮಾ ನಟಿಸಿದ್ದು, ಲೋಕಿ ತವಸ್ಯ ಸಂಗೀತ ಸಂಯೋಜಿಸಿದ್ದಾರೆ.

    ಫಿಕ್ಸ್​ ಆಯ್ತು ‘ಪೊನ್ನಿಯನ್​ ಸೆಲ್ವನ್​ 2’ ಬಿಡುಗಡೆ ದಿನಾಂಕ … ಯಾವಾಗ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts