

ಬೆಂಗಳೂರು: ದೇಶದ ಅತಿ ದೊಡ್ಡ ಹಡಗು ನಿರ್ಮಾಣ ಹಾಗೂ ನಿರ್ವಹಣೆ ಕೇಂದ್ರ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆ ಟೆಕ್ನೀಷಿಯನ್ ಅಪ್ರೆಂಟಿಸ್ ಹಾಗೂ ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಸಲಿದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕೊಚ್ಚಿನ್ ಶಿಪ್‌ಯಾರ್ಡ್ ಹಿನ್ನೆಲೆ
ಇದರ ಪ್ರಧಾನ ಕಚೇರಿ ಕೇರಳದಲ್ಲಿದೆ. ಭಾರತೀಯ ನೌಕಾಪಡೆಗೆ ಮೊದಲ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನ್ನು ನಿರ್ಮಿಸಿಕೊಡುವ ನೇತೃತ್ವ ವಹಿಸಿತ್ತು. 1972ನೇ ಇಸವಿಯ ಏ.29ರಂದು ಸ್ಥಾಪಿಸಲಾಯಿತು.
ಒಟ್ಟು ಹುದ್ದೆ: 308
ವಿಭಾಗಗಳು
ಐಟಿಐ ಟ್ರೇಡ್ ಅಪ್ರೆಂಟಿಸ್ 300
ಟಕ್ನೀಷಿಯನ್ ಅಪ್ರೆಂಟಿಸ್ 8
ವಿದ್ಯಾರ್ಹತೆ: ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಕನಿಷ್ಠ 10ನೇ ತರಗತಿ, ಐಟಿಐ ತೇರ್ಗಡೆಯಾಗಿರಬೇಕು (ಎನ್‌ಟಿಸಿ ಪ್ರಮಾಣಪತ್ರ ಕಡ್ಡಾಯ). ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗೆ ವೊಕೇಷನಲ್ ಹೈಯರ್ ಸೆಕೆಂಡರಿ ಎಜ್ಯುಕೇಷನ್ (ವಿಎಚ್‌ಎಸ್‌ಇ) ತೇರ್ಗಡೆಯಾಗಿರಬೇಕು.
ವಯೋಮಿತಿ: 2023ರ ಅ.4 ಪ್ರಕಾರ ಕನಿಷ್ಠ 18 ವರ್ಷ ಪೂರೈಸಿರುವ ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ವೆಬ್‌ಸೈಟ್‌ನಲ್ಲಿ ಪೂರ್ಣಗೊಳಿಸಿರುವ ಅರ್ಜಿ ಕಳುಹಿಸಬೇಕು. ಪೂರಕ ದಾಖಲೆಗಳು ಕಡ್ಡಾಯ.
ಆಯ್ಕೆ ಹೇಗೆ?
ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಲಿದ್ದು, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸ್ಟೈಪೆಂಡ್
ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ 8,000 ರೂ., ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗೆ 9,000 ರೂ. ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ.
ತರಬೇತಿ ಅವಧಿ
ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷದ ಅವಧಿಗೆ ತರಬೇತಿ ಇರಲಿದೆ. ಇದಕ್ಕೂ ಮೊದಲು ಇತರ ಸಂಸ್ಥೆಗಳಲ್ಲಿ ತರಬೇತಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಅರ್ಜಿ ಸಲ್ಲಿಕೆಗೆ ಅಂತಿಮ ದಿನ: 4.10.2023
ಹೆಚ್ಚಿನ ಮಾಹಿತಿಗಾಗಿ: https://cochinshipyard.in/