ಆರ್ಥಿಕತೆ ಬೆನ್ನೆಲುಬು ಸಹಕಾರ ಕ್ಷೇತ್ರ

15sgr4
ಸಾಗರದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಆರ್.ಎಂ.ಮಂಜುನಾಥ ಗೌಡ, ಎಸ್.ಕೆ.ಮರಿಯಪ್ಪ, ವಾಟಗೋಡು ಸುರೇಶ್ ಇತರರಿದ್ದರು.
Published on

ಸಾಗರ: ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಹಕಾರ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಆರ್ಯ ಈಡಿಗ ಸಭಾಭವನದಲ್ಲಿ ಸಹಕಾರ ಯೂನಿಯನ್ ಮತ್ತು ವಿವಿಧ ಸಹಕಾರ ಸಂಘಗಳಿಂದ ಆಯೋಜಿಸಿದ್ದ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರ ನಂಬಿಕೆ ಮೇಲೆ ನಡೆಯುತ್ತಿದ್ದು, ಸಹಕಾರ ಕ್ಷೇತ್ರ ಉಳಿಯಬೇಕು ಮತ್ತು ಸದೃಢವಾಗಬೇಕು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಖಾತೆ ಹೊಂದಿರುವ ರೈತರಿಗೆ ಡಿಸಿಸಿ ಬ್ಯಾಂಕ್ ಹೆಚ್ಚು ಸಾಲ ಕೊಡುತ್ತಿದೆ. ವಾಣಿಜ್ಯ ಬ್ಯಾಂಕ್‌ಗಳು ನಾವು ಹೆಚ್ಚು ಸಾಲ ಕೊಟ್ಟಿದ್ದೇವೆ ಎಂದು ಹೇಳಿದರೂ, ಸಣ್ಣ ಮತ್ತು ಅತಿಸಣ್ಣ ರೈತರಲ್ಲಿ ಆರ್ಥಿಕ ಚೈತನ್ಯ ತುಂಬುವ ಕೆಲಸ ಮಾಡುತ್ತಿರುವುದು ಡಿಸಿಸಿ ಬ್ಯಾಂಕ್ ಎನ್ನುವುದು ಮರೆಯುವಂತಿಲ್ಲ ಎಂದು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಪೈಪೋಟಿ ಎದುರಿಸಲು ನಾವು ಸಿದ್ಧರಾಗಬೇಕು. ತಾಲೂಕಿನಲ್ಲಿ 40 ಸಾವಿರ ರೈತರಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುತ್ತಿದ್ದು, ಸಹಕಾರ ಸಂಸ್ಥೆಗಳು ಸಣ್ಣ, ಅತಿಸಣ್ಣ ಕೃಷಿ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡುತ್ತಿದೆ. ಸಹಕಾರ ಸಂಘಟನೆಗಳು ರೈತಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಆರ್.ಎಂ.ಮಂಜುನಾಥಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎನ್.ವಿದ್ಯಾಧರ, ಪ್ರಮುಖರಾದ ರಾಜು ಜಿ.ಪಟೇಲ್, ಕೃಷ್ಣಮೂರ್ತಿ ಭಂಡಾರಿ, ಹರನಾಥ ರಾವ್, ಶ್ರೀಧರ ಹೆಗಡೆ, ಬಿ.ಎ.ಇಂದೂಧರ, ಎನ್.ನಾರಾಯಣ, ಕೆ.ಸಿ.ದೇವಪ್ಪ, ಶಶಿಧರ್, ಅಮೃತೇಶ್ವರ್, ಗಣಪತಿ, ಕೆ.ಸತೀಶ್, ಜಗದೀಶ್ ಕುರ್ಡೇಕರ್, ಎನ್.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net