

Holi;ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿನ ಗೋರಾಖ್ಪುರದ ಗೋರಾಖ್ನಾಥ್ ದೇವಸ್ಥಾನದಲ್ಲಿ ರಂಗು ರಂಗಿನ ಬಣ್ಣಗಳಲ್ಲಿ ಮಿಂದೇಳುವ ಮೂಲಕ ಶುಕ್ರವಾರ ಹೋಳಿ ಹಬ್ಬ ಆಚರಿಸಿದರು.
ಸಾಂಪ್ರದಾಯಿಕ ಕಾವಿಯಲ್ಲಿ ಬಟ್ಟೆಯಲ್ಲಿ ಕಾಣಿಸಸಿಕೊಂಡ ಸಿಎಂ ಯೋಗಿ, ದೇವಸ್ಥಾನದ ಭಕ್ತರ ಜತೆ ಹೂವುಗಳು ಮತ್ತು ಬಣ್ಣಗಳೊಂದಿಗೆ ಹೋಳಿ ಆಡಿದರು. ಈ ಸಮಯದಲ್ಲಿ ಸಿಎಂ ಯೋಗಿಯ ವಿಭಿನ್ನ ಶೈಲಿ ಕಂಡುಬಂದರು. ಮತ್ತು ದೇವಾಲಯದ ಆವರಣದಲ್ಲಿರುವ ಹೋಳಿಕಾ ದಹನ ಸ್ಥಳದಲ್ಲಿ ಪೂಜೆ ಮತ್ತು ಆರತಿಯನ್ನು ನೆರವೇರಿಸಿದರು. ರೋಮಾಂಚಕ ಹೋಳಿ ಹಬ್ಬಕ್ಕೆ ನಾಂದಿ ಹಾಡಿದರು.
ಇದೇ ಉತ್ಸಾಹದಲ್ಲಿ ಹಲವು ಬಿಜೆಪಿ ಮುಖಂಡರು ಬಣ್ಣದ ಹಬ್ಬವನ್ನು ಅಪ್ಪಿಕೊಂಡು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.(ಏಜೆನ್ಸೀಸ್)