2024ರ ಚುನಾವಣೆಗೂ ಮುನ್ನ ಬಿಜೆಪಿ ಬಂಗಾಳದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ: ಮಮತಾ ಬ್ಯಾನರ್ಜಿ

Untitled design - 2023-07-27T201410.414
Published on

ಪಶ್ಚಿಮ ಬಂಗಾಳ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ರಾಜ್ಯವನ್ನು ಕೆಟ್ಟದಾಗಿ ಬಿಂಬಿಸಲು ವಿರೋಧ ಪಕ್ಷ ಬಿಜೆಪಿ ಜನರ ನಡುವೆ ಒಡಕು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಜುಲೈ 27) ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಚರ್ಚೆಯೊಂದರ ವೇಳೆ ಮಾತನಾಡಿದ ಪ.ಬಂಗಾಳ ಸಿಎಂ, "ತೃಣಮೂಲ ಕಾಂಗ್ರೆಸ್‌ನ ಮತಗಳನ್ನು ವಿಭಜಿಸಬಲ್ಲ ಯಾವುದೇ ಪಕ್ಷಕ್ಕೆ ಹಣ ನೀಡಲು ಬಿಜೆಪಿ ಯೋಜಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಯಾರೆಲ್ಲಾ ಶಾಮಿಲಾಗಿದ್ದಾರೆ ಎಂಬುದು ತಿಳಿದಿದೆ. ಈಗ ಅವರ ಹೆಸರು ಹೇಳುವುದಿಲ್ಲ. ಸಮಾಜವನ್ನು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ವಿಭಜಿಸಲು ಯೋಜಿಸುತ್ತಿದ್ದಾರೆ" ಎಂದು ಹೇಳಿದರು(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net