ತುಮಕೂರಲ್ಲಿ ದೇವಿಗೆ ಖಡ್ಗ ನೀಡಿದ ಸಿಎಂ ಬೊಮ್ಮಾಯಿ!

tumkur khadga
Published on

ತುಮಕೂರು: ಬಿಜೆಪಿಯ ಜನಸಂಕಲ್ಪ ಯಾತ್ರೆ ಹಿನ್ನೆಲೆ ಇಂದು(ಬುಧವಾರ) ತುಮಕೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಗ್ರಾಮದ ದೇವಿಗೆ ಬೆಳ್ಳಿ ಖಡ್ಗ ಹಸ್ತಾಂತರಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನೂತನ ಬಿಜೆಪಿ ಕಾರ್ಯಾಲಯ 'ಶಕ್ತಿ ಸೌಧ' ಉದ್ಘಾಟಿಸಿದ ಬೊಮ್ಮಾಯಿ ಬಸವರಾಜು ಅವರಿಗೆ ಮಾಜಿ ಶಾಸಕ‌ ಬಿ.ಸುರೇಶ್ ಗೌಡ ಖಡ್ಗ ನೀಡಿ ಅಭಿನಂದಿಸಿದರು. ಈ ವೇಳೆ ಪ್ರೀತಿಯಿಂದಲೇ ಇದನ್ನು ಹಿಂತಿರುಗಿಸಿದ ಸಿಎಂ, 'ನಾನು ಖಡ್ಗ, ಗದೆಯನ್ನು ಪಡೆದರೂ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ಈ ಊರಿನ ದೇವಿಗೆ ಖಡ್ಗ ನೀಡುವೆ. ದೇವಿ ಸುರೇಶ್ ಗೌಡರಿಗೆ ಆಶೀರ್ವದಿಸಲಿ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net