ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಚೀಲದಲ್ಲಿ ಪತ್ನಿಯ ಶವ ತುಂಬಿಕೊಂಡು ಸೈಕಲ್​ನಲ್ಲಿ ಸಾಗಿಸುತ್ತಿದ್ದ ಪತಿ..! ಯಳಂದೂರಲ್ಲಿ ಹೃದಯವಿದ್ರಾವಕ ಘಟನೆ

Untitled-1
Published on

ಚಾಮರಾಜನಗರ: ಶವ ಸಂಸ್ಕಾರಕ್ಕೂ ಹಣವಿಲ್ಲದೆ ಪತ್ನಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸೈಕಲ್​ನಲ್ಲಿ ಸಾಗಿಸುತ್ತಿದ್ದ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ಸಂಭವಿಸಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಾಗೆಪುರ ಗ್ರಾಮದ ಕಾಳಮ್ಮ(26) ಮೃತ ದುರ್ದೈವಿ. ಇವರ ಪತಿ ರವಿ ಮತ್ತು ಕಾಳಮ್ಮ ಇಬ್ಬರೂ ಚಿಂದಿ ಆಯುವ ಕೆಲಸ ಮಾಡಿಕೊಂಡು ಯಳಂದೂರು ತಾಲೂಕಿನ ಕಂದಹಳ್ಳಿ ಸಮೀಪ ವಾಸವಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಕಾಳಮ್ಮ ಇಂದು(ಬುಧವಾರ) ಮನೆಯಲ್ಲೇ ಮೃತಪಟ್ಟಿದ್ದು, ಆಕೆಯನ್ನು ಕಳೆದುಕೊಂಡ ನೋವಿನಲ್ಲಿದ್ದ ಪತಿಗೆ ಅಂತ್ಯಸಂಸ್ಕಾರಕ್ಕೆ ಹಣ ಹೊಂದಿಸುವುದು ಹೇಗೆಂದು ದಿಕ್ಕುತೋಚದೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಕೊಂಡು ಸೈಕಲ್​ನಲ್ಲಿ ಸಾಗಿಸುತ್ತಿದ್ದ.

ಇದನ್ನು ಕಂಡ ಸ್ಥಳೀಯರು ವಿಚಾರಿಸಿದಾಗ ಗಂಡ ಅಸಹಾಯಕತೆ ತೋಡಿಕೊಂಡಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದರು.(ದಿಗ್ವಿಜಯ ನ್ಯೂಸ್, ಚಾಮರಾಜನಗರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net