ಪಾರ್ಟಿ ಹೆಸರಲ್ಲಿ ಪ್ರಾಣಿಗಳಿಗೆ ಹಿಂಸೆ; ನೈಟ್​ಕ್ಲಬ್​ ವಿರುದ್ಧ ಪ್ರಾಣಿಪ್ರಿಯರು ಕೆಂಡಾಮಂಡಲ

Night Club
Published on

ಕೊಲ್ಕತ್ತಾ: ಘಟನೆ ಒಂದರಲ್ಲಿ ನೈಟ್​ಕಲ್ಬ್​ ಮಾಲೀಕರು ಸರ್ಕಸ್​ ಥೀಮ್​ ಎಂಬ ಹೆಸರಿನ ಪಾರ್ಟಿಯಲ್ಲಿ , ಮನರಂಜನೆಗಾಗಿ ಕೋತಿಯನ್ನು ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಘಟನೆಯೂ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಕ್ಯಾಮಾಕ್​ ಸ್ಟ್ರೀಟ್​ನಲ್ಲಿರುವ ಟಾಯ್​ ರೂಮ್​ ಎಂಬ ನೈಟ್​ಕ್ಲಬ್​ನಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ ದುರಿನ ಮೇರೆಗೆ ಪೊಲೀಸರು ಕ್ಲಬ್​ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.

ಪ್ರಾಣಿಗಳಿಗೆ ಹಿಂಸೆ

ಟಾಯ್​ ರೂಮ್​ ಎಂಬ ನೈಟ್​ ಕ್ಲಬ್​ ಜೂನ್​ 16ರಂದು ಸರ್ಕಸ್​ ಥೀಮ್​ ಎಂಬ ಹೆಸರಿನಲ್ಲಿ ಅಂಧಿನ ದಿನ ಪಾರ್ಟಿ ಒಂದನ್ನು ಆಯೋಜಿಸಿದೆ. ಕ್ಲಬ್​ಗೆ ಬರುವ ಗ್ರಾಹಕರಿಗೆ ಹೆಚ್ಚಿನ ಮನರಂಜನೆಯನ್ನು ಒದಗಿಸಲು ಮುಂದಾದ ಮಾಲೀಕರು ಕೋತಿ ಮರಿಗಳನ್ನು ಚೈನ್​ನಲ್ಲಿ ಕಟ್ಟಿ ಹಾಕಿದ್ದಾರೆ.

ಘಟನೆಯ ವಿಡಿಯೋವನ್ನು ಬಂಗಾಳದ ಖ್ಯಾತ ನಟಿ ಸ್ವಸ್ತಿಕಾ ಮುಖರ್ಜಿ ಥೀಮ್ಡ್​​ ಪಾರ್ಟಿ ಹೆಸರಿನಲ್ಲಿ ಪ್ರಾಣಿಗಹಳಿಗೆ ಈ ರೀತಿ ಚಿತ್ರಹಿಂಸೆ ಕೊಡುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ. ಈ ರೀತಿಯ ಕೃತ್ಯಗಳನ್ನು ನೋಡಿಕೊಂಡ ಯಾರು ಸುಮ್ಮನೆ ಕುಳಿತುಕೊಳ್ಳುವ ಮಾತಿಲ್ಲ ಎಂದು ಟಾಯ್​ ರೂಮ್​ ನೈಟ್​ಕ್ಲಬ್​ ವಿರುದ್ಧ ಕಿಡಿಕಾರಿದ್ಧಾರೆ.

ಮದರಾಸಿಗಳು ಮಾಡಿರುವ ಕೆಲಸ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಟಾಯ್​ ರೂಮ್​ ನೈಟ್​ಕ್ಲಬ್​ ಮಾಲೀಕರು ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಕೆಲವ ಮದರಾಸಿಗಳು ರೆಸ್ಟೋರೆಂಟ್​ನ ಒಳಗೆ ಬರಲು ಯತ್ನಿಸಿದ್ದರು ಅವರನ್ನು ತಡೆದಾಗ ಹೊರಾಂಗಣದಲ್ಲಿ ಈ ರೀತಿ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net