ದೇವರ ಕಾರ್ಯದಿಂದ ದೇವರಿಗೆ ಹತ್ತಿರ

god
ಶ್ರೀರಾಮನಾಮ ಜಪದ ಸಾಮೂಹಿಕ ಪಠಣ ಕಾರ್ಯಕ್ರಮವನ್ನು ವಿದ್ಯಾಧೀಶ ಶ್ರೀಗಳು ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ದಿನನಿತ್ಯ ದೇವರ ನಾಮಸ್ಮರಣೆ, ದೇವರ ಪೂಜೆ ಹಾಗೂ ದೇವಸ್ಥಾನದ ಪ್ರತಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಮಕ್ಕಳಿಗೂ ತೊಡಗಿಸಿಕೊಳ್ಳುವತ್ತ ಪ್ರೇರೇಪಿಸಬೇಕು. ಇದರಿಂದ ದೇವರು ಸದಾಕಾಲ ನಿಮ್ಮೊಂದಿಗೆ ಇರುವುದರಲ್ಲಿ ಸಂಶಯವಿಲ್ಲ ಎಂದು ಶ್ರೀ ಸಂಸ್ಥಾನ ಗೋಕರ್ಣಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀರಾಮ ಭಜನಾ ಮಂಡಳಿಯ ಸುವರ್ಣ ಮಹೋತ್ಸವ ಹಾಗೂ ಶ್ರೀರಾಮ ಮಂದಿರದ ರಜತ ಮಹೋತ್ಸವದ ಪ್ರಯುಕ್ತ ಭಾನುವಾರ 2 ಲಕ್ಷ ಶ್ರೀರಾಮನಾಮ ಜಪದ ಸಾಮೂಹಿಕ ಪಠಣ ಉದ್ಘಾಟಿಸಿ ಆಶೀರ್ವವನ ನೀಡಿದರು.

ಕಾರ್ಕಳ ರಾಘವ ಜಪ ಕೇಂದ್ರದ ವಿಘ್ನೇಶ್ ಭಟ್ ನೇತೃತ್ವದಲ್ಲಿ ಶ್ರೀರಾಮ ಜಪದ ಸಾಮೂಹಿಕ ಪಠಣ ನಡೆಯಿತು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಉಮಾನಾಥ್ ಪೈ, ಸುವರ್ಣ ಮಹೋತ್ಸವ ಅಧ್ಯಕ್ಷ ಪ್ರೇಮಾನಂದ ಶೆಣೈ, ಅರ್ಚಕರಾದ ವಿಜೇಂದ್ರ ಭಟ್, ಸುಹಾಸ್ ಭಟ್ ಮುನಿಯಾಲು, ಸತ್ಯೇಂದ್ರ ಕಿಣಿ, ರಾಮ ಮಂದಿರ ಟ್ರಸ್ಟ್ ಮಾಜಿ ಅಧ್ಯಕ್ಷರಾದ ವಿಠ್ಠಲ್ ಶೆಣೈ, ರಾಮನಾಥ ಶೆಣೈ, ಟ್ರಸ್ಟ್‌ನ ಕಾರ್ಯದರ್ಶಿ ಉಮೇಶ್ ಹೆಗ್ಡೆ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net