ಬಿಜೂರಿನಲ್ಲಿ ಮಕ್ಕಳ ದಿನಾಚರಣೆ

bijur
ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
Published on

ಬಿಜೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲೆಯ ಕಿರಿಯ ವಿದ್ಯಾರ್ಥಿ ಯಶ್ವಿ ಉದ್ಘಾಟಿಸಿದರು. ಮಕ್ಕಳ ಮಿತ್ರ, ಕಾರ್ಯಕ್ರಮದ ಪ್ರಾಯೋಜಕ ರಾಜೇಂದ್ರ ಬಿಜೂರು ಅಧ್ಯಕ್ಷತೆ ವಹಿಸಿದ್ದರು. ಅನುರಾಧ ಗುರುರಾಜ್ ಗಂಟಿಹೊಳೆ, ಮಕ್ಕಳ ಮಿತ್ರೆ ಅನಿತಾ ಆರ್.ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ಮಂಜುನಾಥ ಬಿಜೂರು ಸ್ವಾಗತಿಸಿದರು. ಶಿಕ್ಷಕರು, ಶಾಲಾ ಸಿಬ್ಬಂದಿ ಇದ್ದರು. ಪಂಚಮಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net