ಭಾರತ ಮಹಿಳೆಯರಿಗೆ ತ್ರಿಕೋನ ಸರಣಿ: ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಸ್ಮೃತಿ ಮಂದನಾ!

blank

ಕೊಲಂಬೊ: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ ತ್ರಿಕೋನ ಮಹಿಳಾ ಏಕದಿನ ಸರಣಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಪನಾಯಕಿ ಸ್ಮತಿ ಮಂದನಾ (116 ರನ್, 101 ಎಸೆತ, 15 ಬೌಂಡರಿ, 2 ಸಿಕ್ಸರ್) 11ನೇ ಏಕದಿನ ಶತಕದ ನೆರವಿನಿಂದ ಹರ್ಮಾನ್‌ಪ್ರೀತ್ ಕೌರ್ ಪಡೆ ಭಾನುವಾರ ನಡೆದ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ಎದುರು 97 ರನ್‌ಗಳ ಬೃಹತ್ ಗೆಲುವು ಒಲಿಸಿಕೊಂಡಿತು. ಈ ಮೂಲಕ ಭಾರತ ಹಾಲಿ ವರ್ಷ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ. ದ.ಆಫ್ರಿಕಾ ಸರಣಿಯಲ್ಲಿ ಭಾಗವಹಿಸಿದ್ದ ಮೂರನೇ ತಂಡವಾಗಿತ್ತು.

blank

ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಸ್ಮತಿ ಹಾಗೂ ಹರ್ಲೀನ್ ಡಿಯೋಲ್ (47) ಜತೆಯಾಟದ ಜತೆಗೆ ಇತರ ಬ್ಯಾಟುಗಾರ್ತಿಯರ ಉಪಯುಕ್ತ ಆಟದ ಬಲದಿಂದ 7 ವಿಕೆಟ್‌ಗೆ 342 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ನಾಯಕಿ ಚಾಮರಿ ಅಟಪಟ್ಟು (51 ರನ್, 66 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕ ಹೋರಾಟದ ನಡುವೆಯೂ ಆಲ್ರೌಂಡರ್ ಸ್ನೇಹಾ ರಾಣಾ (38ಕ್ಕೆ 4) ದಾಳಿಗೆ ತತ್ತರಿಸಿದ ಲಂಕಾ 48.2 ಓವರ್‌ಗಳಲ್ಲಿ 245 ರನ್‌ಗಳಿಗೆ ಸರ್ವಪತನ ಕಂಡಿತು. ಅಮನ್‌ಜೋತ್ ಕೌರ್ ಮೂರು ವಿಕೆಟ್ ಪಡೆದರು.

ಭಾರತ: 7 ವಿಕೆಟ್‌ಗೆ 345 (ಪ್ರತೀಕಾ 30, ಸ್ಮತಿ 116, ಹರ್ಲೀನ್ 47, ಹರ್ಮಾನ್‌ಪ್ರೀತ್ 41, ಜೆಮೀಮಾ 44, ರಿಚಾ 8, ಅಮನ್‌ಜೋತ್ 18, ದೀಪ್ತಿ 20, ಮಲ್ಕಿ 74ಕ್ಕೆ 2, ಸುಗಂಧಿಕಾ 59ಕ್ಕೆ 2).

ಶ್ರೀಲಂಕಾ: 48.2 ಓವರ್‌ಗಳಲ್ಲಿ 245 (ವಿಶ್ಮಿ 36, ಚಾಮರಿ 51, ನಿಲಾಕ್ಷಿಕ 48, ಹರ್ಷಿತಾ 26, ಅನುಷ್ಕಾ 28, ಸುಗಂಧಿಕಾ 27, ಸ್ನೇಹಾ 38ಕ್ಕೆ 4, ಅಮನ್‌ಜೋತ್ 54ಕ್ಕೆ 3). ಪಂದ್ಯಶ್ರೇಷ್ಠ: ಸ್ಮತಿ ಮಂದನಾ. ಸರಣಿಶ್ರೇಷ್ಠ: ಸ್ನೇಹಾ ರಾಣಾ

11. ಸ್ಮತಿ ಮಂದನಾ (11) ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಸಾಧಕಿಯರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರು. ಮೆಗ್ ಲ್ಯಾನಿಂಗ್ (15), ಸುಜಿ ಬೇಟ್ಸ್ (13) ಮೊದಲೆರಡು ಸ್ಥಾನದಲ್ಲಿದ್ದಾರೆ.

1. ಸ್ಮತಿ ಮಂದನಾ (54) ಏಕದಿನದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಹರ್ಮಾನ್‌ಪ್ರೀತ್ ಕೌರ್ (23) ದಾಖಲೆ ಹಿಂದಿಕ್ಕಿ, ಅಗ್ರಸ್ಥಾನಕ್ಕೇರಿದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank