

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ-2025 ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ಬೆಳ್ಮಣ್ ಘಟ ಸಮಿತಿಗಳು ಹಾಗೂ ಇತರ ಸಂಘಟನೆ ಸಹಯೋಗದಲ್ಲಿ ಇನ್ನಾ, ಪಲಿಮಾರು, ಕುತ್ಯಾರು, ಶಿರ್ವ, ಪಡುಬಿದ್ರಿ, ಮುದರಂಗಡಿ, ಬೆಳ್ಳಿಬೆಟ್ಟು, ಪಿಲಾರು, ಪಾಂಗಾಳ ಗ್ರಾಮಗಳಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ಪಿಲಾರು ಶಾರ್ವರಿ ಘಟ ಸಮಿತಿ ಆಶ್ರಯದಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಚ್ಛತಾ ಕಾರ್ಯವನ್ನು ಮುಖ್ಯಶಿಕ್ಷಕಿ ಶರ್ಮಿಳಾ ಉದ್ಘಾಟಿಸಿದರು. ಯೋಜನೆ ವಲಯ ಸಂಯೋಜಕಿ ದಿವ್ಯಶ್ರೀ ಸ್ವಚ್ಛತಾ ಕಾರ್ಯಕ್ರಮದ ಮಾಹಿತಿ ನೀಡಿದರು. ಸೇವಾ ದೀಕ್ಷಿತೆ ಸೌಮ್ಯಾ ಆಚಾರ್ಯ ಮುದರಂಗಡಿ, ಶಾರ್ವರಿ ಘಟಸಮಿತಿ ಅಧ್ಯಕ್ಷೆ ಅನ್ನಪೂರ್ಣ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಶ್ವಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ವಿಷ್ಣುಮೂರ್ತಿ ಘಟಕ ಶಿರ್ವ ಸಹಯೋಗದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬಜರಂಗದಳ ಶಿರ್ವ ವಿಷ್ಣುಮೂರ್ತಿ ಘಟಕ ಸಹ ಸಂಯೋಜಕ ಸುಕೇಶ್ ಶೆಟ್ಟಿ, ಪ್ರಮುಖರಾದ ರತ್ನಾಕರ, ಚಂದ್ರಾವತಿ, ಲಕ್ಷ್ಮೀ, ಪ್ರಮೀಳಾ ಮತ್ತಿತರರಿದ್ದರು. ಶಾಂಭವಿ ಘಟ ಸಮಿತಿ, ಪಲಿಮಾರು ಶ್ರೀ ಭೂಮಿ ಘಟಸಮಿತಿ, ಶ್ರೀ ದುರ್ಗಾದೇವಿ ಘಟಸಮಿತಿ ಹಾಗೂ ಪಡುಬಿದ್ರಿ ವಲಯ ಟೈಲರ್ಸ್ ಅಸೋಸಿಯೇಶನ್, ಸಾಂತೂರು ಶ್ರೀ ಅಭೀಷ್ಟ ಘಟಸಮಿತಿ ಹಾಗೂ ಪಿಲಾರು ಸಾಂತೂರು ಜವನೆರ್ ಸಂಘಟನೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮಗಳು ನೆರವೇರಿದವು. ಪ್ರಮುಖರಾದ ಅನಿಲ್, ಶಶಿಕಲಾ, ಪುಷ್ಪಲತಾ, ಸರಿತಾ ಶೆಟ್ಟಿ, ವಂದನಾ, ಪದ್ಮಾ, ಸುಮತಿ, ರಮೇಶ್ ಶೆಟ್ಟಿ, ರಾಘು ಶೆಟ್ಟಿಗಾರ್, ಶ್ರೀಧರ್, ರಾಜೇಶ್, ಮೀನಾಕ್ಷಿ ಸಹಿತ ಹಲವರು ಭಾಗವಹಿಸಿದ್ದರು.