ಯುವ ಜನತೆಯ ರಕ್ತದಾನ ಸೇವೆ ಶ್ರೇಷ್ಠ

sid (1)
Published on

ವಿಜಯವಾಣಿ ಸುದ್ದಿಜಾಲ ಹಾಲಾಡಿ

ಯುವ ಜನತೆ ವಿವಿಧ ಸಂ ಸಂಸ್ಥೆಗಳು ಆಯೋಜಿಸುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ಸ್ವಯಂ ಪ್ರೇರಿತರಾಗಿ ರಕ್ತ ನೀಡಿ ತಮ್ಮ ಅಮೂಲ್ಯ ಸೇವೆ ನೀಡುತ್ತಿರುವುದು ಪ್ರಶಂಸನೀಯ. ಸಂಸಂಸ್ಥೆಗಳ ನೇತೃತ್ವದ ರಕ್ತದಾನ ಶಿಬಿರಗಳಲ್ಲಿ ಹೊಸ ರಕ್ತ ದಾನಿಗಳು ಸಾಮೂಹಿಕವಾಗಿ ರಕ್ತದಾನ ವಾಡುತ್ತಿರುವುದು ಶ್ರೇಷ್ಠ ಕಾರ್ಯ ಎಂದು ಉಡುಪಿ ಜಿಲ್ಲಾ ಮೊಗವೀರ ಯುವ ಸಂಟನೆ ಅಧ್ಯಕ್ಷ ಜಯಂತ್ ಅಮೀನ್ ಕೋಡಿ ಹೇಳಿದರು.

ಮೊಗವೀರ ಯುವ ಸಂಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಇವರ ಸಾರಥ್ಯದಲ್ಲಿ ಹಾಲಾಡಿ ಶಾರದೋತ್ಸವ ಸಮಿತಿ, ಗಣೇಶೋತ್ಸವ ಸಮಿತಿ, ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್, ಮೈತ್ರಿ ಯುವಕ ಮಂಡಲ, ಕೆ.ಎಂ.ಸಿ ರಕ್ತನಿಧಿ ವಿಭಾಗ ಮಣಿಪಾಲ, ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಹಾಲಾಡಿ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ಉದ್ಘಾಟಿಸಿ ವಾತನಾಡಿದರು.

ಉಡುಪಿ ಜಿಲ್ಲಾ ಮೊಗವೀರ ಯುವ ಸಂಟನೆ ನಿಕಟ ಪೂರ್ವಾಧ್ಯಕ್ಷ ರಾಜೇಂದ್ರ ಸುವರ್ಣ, ಹಾಲಾಡಿ ಶಾರದೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಣೈ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಮೊಗವೀರ ಹಾಲಾಡಿ, ಹಾಲಾಡಿ ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮೂದೂರಿ ಮೈತ್ರಿ ಯುವಕ ಮಂಡಲ ಅಧ್ಯಕ್ಷ ಸುರೇಂದ್ರ ನಾಯ್ಕ, ಕೆ.ಎಂ.ಸಿ ರಕ್ತನಿಧಿ ವಿಭಾಗದ ಡಾ.ವಿವೇಕ್, ಮೊಗವೀರ ಯುವ ಸಂಟನೆ ಶಂಕರನಾರಾಯಣ ಟಕ ಕಾರ್ಯದರ್ಶಿ ಲೋಕೇಶ್ ಮರತೂರು, ಗೌರವಾಧ್ಯಕ್ಷ ರುರಾಮ್ ಎಂ., ಮೋಗವೀರ ಸಂಟನೆ ಮುಂದಾಳು ಶಿವರಾಮ್ ಮೊಗವೀರ ಮರೂರು ಉಪಸ್ಥಿತರಿದ್ದರು.

ಮೊಗವೀರ ಯುವ ಸಂಟನೆ ಹಾಲಾಡಿ ಶಂಕರನಾರಾಯಣ ಟಕದ ಗೌರವಾಧ್ಯಕ್ಷ ರುರಾಮ್ ಎಂ.ಸ್ವಾಗತಿಸಿ, ಕಾರ್ಯದರ್ಶಿ ಲೋಕೇಶ್ ಮರತೂರು ವಂದಿಸಿದರು. ಜಗದೀಶ್ ಬಿದ್ಕಲ್‌ಕಟ್ಟೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net