

ಗಂಗೊಳ್ಳಿ: ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನದ ಅಂಗವಾಗಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್, ಗಂಗೊಳ್ಳಿ ಕೊಸೆಸ್ಸಾಂವ್ ಮಾತೆಯ ಚರ್ಚ್ ಘಟಕ, ಕಥೋಲಿಕ್ ಸ್ತ್ರೀ ಸಂಘಟನೆ ಗಂಗೊಳ್ಳಿ, ಯುವ ಆಯೋಗ, ಭಾರತೀಯ ಕೆಥೊಲಿಕ್ ಯುವ ಸಂಚಾಲನ್ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಗಂಗೊಳ್ಳಿಯಲ್ಲಿ ಬುಧವಾರ ನಡೆಯಿತು.
ಗಂಗೊಳ್ಳಿಯ ಬಂದರು ಬಸ್ ನಿಲ್ದಾಣದಿಂದ ಗಂಗೊಳ್ಳಿ ಗ್ರಾಮ ಪಂಚಾಯಿತಿ ತನಕ ಇರುವ ರಸ್ತೆ ಇಕ್ಕೆಲಗಳ ಕಸಕಡ್ಡಿ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಕೆಥೊಲಿಕ್ ಸಭಾ ಗಂಗೊಳ್ಳಿ ಘಟಕ ಅಧ್ಯಕ್ಷ ಎಡ್ವರ್ಡ್ ಫರ್ನಾಂಡಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಸ್ಥಾಪಕ ಅಧ್ಯಕ್ಷ ಕಿರಣ್ ಕ್ರಾಸ್ತಾ, ಧರ್ಮಗುರು ರೋಶನ್ ಥಾಮಸ್ ಡಿಸೋಜ, ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.