

ಕುಂದಾಪುರ: ‘ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನದ ರಾಯಭಾರಿಯಾಗಿ ಕೋಡಿಯ ಬ್ಯಾರಿಸ್ ಬಿ.ಎಡ್. ಕಾಲೇಜು ವಿದ್ಯಾರ್ಥಿನಿ ಶರ್ಮಿನ್ ಬಾನು ಎಂ.ಎಸ್. ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವರ್ಲ್ಡ್ ಅಸೋಸಿಯೇಷನ್ ಆಫ್ ಗರ್ಲ್ ಗೈಡ್ಸ್ ಆ್ಯಂಡ್ ಗರ್ಲ್ ಸ್ಕೌಟ್ಸ್‌ನ ಅಡ್ವಕೇಟ್ ಹಾಗೂ ಯುನಿಸೆಫ್ ರಿಪೋರ್ಟ್ ಗ್ಲೋಬಲ್ ಅಂಬಾಸಿಡರ್ ಆಗಿರುವ ಇವರು ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣದ ಬಗ್ಗೆ, ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಜಾಗತಿಕ ಸಮೀಕ್ಷೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೈಎನ್‌ಜಿಎ ಆಹಾರ ಮತ್ತು ಕೃಷಿ ಸಹಯೋಗದಲ್ಲಿ ನಡೆದ ಸಿಎಸ್‌ಡಬಬ್ಲುೃ 66 ಕೂಟದಲ್ಲಿ ಪಠ್ಯಕ್ರಮದಲ್ಲಿ ಹವಾಮಾನ ಶಿಕ್ಷಣ ಕಡ್ಡಾಯಗೊಳಿಸುವ ಕುರಿತು ತಮ್ಮ ಶಿಫಾರಸು ಮಂಡಿಸಿದ್ದಾರೆ. ಹವಾಮಾನ ಬದಲಾವಣೆ ಮತ್ತು ಲಿಂಗ ಕುರಿತಾದ ಡಬ್ಲುೃಎಜಿಜಿಎಸ್ ಮೊತ್ತ ಮೊದಲ ಜಾಗತಿಕ ಸಮಾಲೋಚನೆಯಲ್ಲಿ ಶಾಲೆಗಳು, ಅಂಚಿನಲ್ಲಿರುವ ಸಮುದಾಯದ ಹುಡುಗಿಯರು ಮತ್ತು ಮಹಿಳೆಯರು (ಕೊಳೆಗೇರಿ)ಯೊಂದಿಗಿನ ಇವರ ಆಫ್‌ಲೈನ್ ಪೋಲ್ ಸಮಾಲೋಚನೆ ರಾಷ್ಟ್ರದ ಗಮನ ಸೆಳೆದಿದೆ.