ಹೆದ್ದಾರಿ ಅಭಿವೃದ್ಧಿಗೆ ಚಾಲನೆ

gantihole
Published on

ಶಂಕರನಾರಾಯಣ: ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಕಾರ್ಯಕರ್ತರ ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಗುದ್ದಲಿಪೂಜೆ ಮಾಡಲಾಗಿದೆ. ತನ್ನ ಶಾಸಕತ್ವ ಅವಧಿಯ ಪ್ರಥಮ ಅನುದಾನವಾಗಿದ್ದು, ಇದ್ದನ್ನು ಶಂಕರನಾರಾಯಣ ಹಾಲಾಡಿ ಹೆದ್ದಾರಿ ಅಭಿವೃದ್ಧಿಗೆ ನೀಡಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಶಂಕರನಾರಾಯಣ ಹಾಲಾಡಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ವತಿಯಿಂದ 10 ಕೋಟಿ ರೂ.ಅನುದಾನ ಮಂಜೂರಾಗಿದೆ.

ಶಂಕರನಾರಾಯಣ ಗ್ರಾಪಂ ಅಧ್ಯಕ್ಷ ಉಮೇಶ ಶೆಟ್ಟಿ ಕಲ್ಗದ್ದೆ, ಸದಸ್ಯರಾದ ರವಿ ಕುಲಾಲ, ಲತಾ, ಪೂರ್ಣಿಮಾ, ಕೃಷ್ಣಮೂರ್ತಿ, ಸುದೀಪ ಶೆಟ್ಟಿ ಹೆಬ್ಬಾಡಿ, ಗುರುದತ್ ಶೇಟ್, ಮುಖಂಡರಾದ ಡಾ.ಕೆ.ಸಚ್ಚಿದಾನಂದ ವೈದ್ಯ, ಕೃಷ್ಣಮೂರ್ತಿ ಡಿ.ಶೇಟ್, ಪಾಂಡುರಂಗ ನಾಯ್ಕ, ವಿಜಯ ಯಡಮಕ್ಕಿ, ಚಂದ್ರಹಾಸ ಹೆಗ್ಡೆ, ಶೇಖರ ಕುಲಾಲ ಸಿದ್ದಾಪುರ, ಗೋಪಾಲ ಕಾಂಚನ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net