More

    ಲಾಕ್​ಡೌನ್​ ಆದರೂ ಈ ಸಿನಿಮಾ ಇನ್ನೂ ಓಡುತ್ತಿದೆ! ಚಿತ್ರ ತೆರೆಕಂಡು ವರ್ಷಗಳು ಉರುಳಿದರೂ ಟಿಕೆಟ್​ ಹಣ ಬರುತ್ತಿದೆ

    ನಿರ್ದೇಶಕ ಸತ್ಯಪ್ರಕಾಶ್​ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿಯವರೆಗೂ ಅವರು ಮಾಡಿದ್ದು ಎರಡೇ ಸಿನಿಮಾ. ಒಂದು ರಾಮಾ ರಾಮಾ ರೇ ಮತ್ತೊಂದು ಒಂದಲ್ಲ ಎರಡಲ್ಲ. ಸಣ್ಣ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾಗಳು ದೊಡ್ಡ ಮಟ್ಟದ ಹೆಸರು ಮಾಡಿವೆ. ಸಿನಿಮಾ ನೋಡಿದವರು ಈಗಲೂ ಈ ಎರಡು ಚಿತ್ರಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದೀಗ ಕ್ವಾರಂಟೈನ್​ ಸಂದರ್ಭದಲ್ಲಿ ಇದೇ ತಂಡ ಖುಷಿಯ ಸುದ್ದಿಯೊಂದನ್ನು ಹೊರಹಾಕಿದೆ. 2016ರಲ್ಲಿ ತೆರೆಕಂಡಿದ್ದ ರಾಮಾ ರಾಮಾ ರೇ ಚಿತ್ರ ಮತ್ತೆ ಪ್ರದರ್ಶನ ಆರಂಭಿಸಿದೆ! ಗಳಿಕೆಯನ್ನೂ ಮಾಡುತ್ತಿದೆ.
    ಅರೇ ಚಿತ್ರಮಂದಿರಗಳೇ ಮುಚ್ಚಿರುವಾಗ ಈ ಸಿನಿಮಾ ಯಾವ ಚಿತ್ರಮಂದಿರದಲ್ಲಿದೆ? ಅದು ಹಾಗಲ್ಲ. ಎರಡು ದಿನಗಳ ಹಿಂದಷ್ಟೇ ಸತ್ಯ ಪಿಕ್ಚರ್ಸ್ ಯೂಟ್ಯೂಬ್​ ಚಾನೆಲ್​ನಲ್ಲಿ ರಾಮಾ ರಾಮಾ ರೇ ಚಿತ್ರ ಅಪ್​ಲೋಡ್​ ಆಗಿದೆ. ಈ ಹಿಂದೆ ಸಿನಿಮಾ ನೋಡಿದವರು ಪದೇಪದೆ ಯೂಟ್ಯೂಬ್​ನಲ್ಲಿ ಚಿತ್ರವನ್ನು ಹುಡುಕಿದ್ದರು. ಆದರೆ, ಆಗಿನ್ನು ಅಪ್​ಲೋಡ್​ ಆಗಿರಲಿಲ್ಲ. ಇದೀಗ ಚಿತ್ರ ನೋಡುಗರಿಗೆ ಲಭ್ಯವಿದೆ. ಅಷ್ಟೇ ಅಲ್ಲ, ಸಿನಿಮಾ ನೋಡಿ ಮೆಚ್ಚಿಕೊಂಡವರು ಗೂಗಲ್​ ಪೇ ಮೂಲಕ ಚಿತ್ರತಂಡಕ್ಕೆ ಹಣ ರವಾನಿಸುತ್ತಿದ್ದಾರೆ. ಕ್ವಾರಂಟೈನ್​ನಲ್ಲೂ ಆದಾಯ ಬರುತ್ತಿದೆ ಎಂದು ಚಿತ್ರದ ನಾಯಕ ನಟರಾಜ್​​ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ.
    ಅಂದಹಾಗೆ, ಇತ್ತೀಚೆಗಷ್ಟೇ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ಮುಖ್ಯಭೂಮಿಕೆ ನಿಭಾಯಿಸಿದ್ದ ಲವ್ ಮಾಕ್​​ಟೇಲ್​ ಸಿನಿಮಾಕ್ಕೂ ಪ್ರೇಕ್ಷಕರು ನೇರವಾಗಿ ನಿರ್ದೇಶಕರ ಖಾತೆಗೆ ಹಣ ರವಾನಿಸಿದ್ದರು. ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರದಿಂದ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಿದ್ದರಿಂದ, ಅಮೆಜಾನ್​ ಪ್ರೈಂನಲ್ಲಿ ಚಿತ್ರ ಪ್ರದರ್ಶನ ಕಂಡಿತ್ತು. ಅಲ್ಲಿ ಆ ಸಿನಿಮಾ ನೋಡಿ ಟಿಕೆಟ್ ಮೊತ್ತವನ್ನು ರವಾನಿಸಿದ್ದರು.
    ರಾಮಾ ರಾಮಾ ರೇ ಚಿತ್ರದಲ್ಲಿ ಕೆ. ಜಯರಾಮ್​, ನಟರಾಜ್​, ಧರ್ಮಣ್ಣ ಕಡೂರು, ಬಿಂಬಶ್ರೀ, ಭಾಸ್ಕರ್​, ಎಂ. ಕೆ. ಮಠ್ ಪಾತ್ರವರ್ಗದಲ್ಲಿದ್ದಾರೆ. ಚಿತ್ರದ ಯೂಟ್ಯೂಬ್​ ಲಿಂಕ್​ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts