ಮೊಬೈಲ್​​ ಸೀಜ್​ ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನಿಗೆ ಇರಿದ Student; ಆಘಾತಕಾರಿ ವಿಡಿಯೋ ವೈರಲ್​

Student Assault
Published on

ಲಖನೌ: ತರಗತಿ ವೇಳೆ ಮೊಬೈಲ್ ಬಳಸುತ್ತಿದ್ದದ್ದಾಗ ವಶಪಡಿಸಿಕೊಂಡಿದ್ದಕ್ಕೆ ಕುಪಿತಗೊಂಡ ವಿದ್ಯಾರ್ಥಿಯೋರ್ವ (Student) ಶಿಕ್ಷಕನಿಗೆ (Teacher) ಚಾಕುವಿನಿಂದ ಇರಿದಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್‌ನ ಮಿಹಿನ್‌ಪುರವದಲ್ಲಿ ನಡೆದಿದೆ.

ನವಯುಗ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಗಾಯಾಳುವನ್ನು ರಾಜೇಂದ್ರ ಪ್ರಸಾದ್​ ವರ್ಮಾ (Teacher) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕೃತ್ಯಕ್ಕೆ ಬಳಸಲಾದ ಚಾಕು ಹಾಗೂ ವಿದ್ಯಾರ್ಥಿಯನ್ನು (Student) ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಎಎಸ್​ಪಿ ರಮಾನಂದ್​ ಪ್ರಸಾದ್​ ಕುಶ್ವಾಹ, ಕಾಲೇಜಿನ ಆವರಣದಲ್ಲಿ ಮೊಬೈಲ್ ತರುವುದು ಹಾಗೂ ಅದರ​ ಬಳಕೆ ನಿಷೇಧಿಸಲಾಗಿದ್ದರು ವಿದ್ಯಾರ್ಥಿಗಳು ಈ ನಿಯಮವನ್ನು ಪಾಲಿಸಿರಲಿಲ್ಲ. ಹೀಗಾಗಿ ಪ್ರಾಧ್ಯಾಪಕ ರಾಜೇಂದ್ರ ಕುಮಾರ್​  (Teacher) ವಿದ್ಯಾರ್ಥಿಗಳ (Students) ಬಳಿ ಇದ್ದ ಮೊಬೈಲ್​ಗಳನ್ನು ವಶಕ್ಕೆ ಪಡೆದು ತಂದೆ-ತಾಯಿಯನ್ನು ಕಾಲೇಜಿಗೆ ಕರೆದುಕೊಂಡು ಬರುವಂತೆ ತಾಕೀತು ಮಾಡಿದ್ದರು.

ಇದರಿಂದ ಕುಪಿತಗೊಂಡ ವಿದ್ಯಾರ್ಥಿಯೋರ್ವ (Student) ಶಿಕ್ಷಕನ ಹತ್ಯೆ ಮಾಡಲು ಸಂಚು ಹಾಕಿದ್ದು, ಅದರಂತೆ ತರಗತಿಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಬೇರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಾಳುವಿನ ನೆರವಿಗೆ ಧಾವಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಕ್ಷಕ ರಾಜೇಂದ್ರ ಪ್ರಸಾದ್​ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಗಾಯಾಳುವಿನ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಹಾಗೂ ಕೃತ್ಯಕ್ಕೆ ಬಳಸಲಾದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎಸ್​ಪಿ ರಮಾನಂದ್​ ಪ್ರಸಾದ್​ ಕುಶ್ವಾಹ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net