

ಕಳೆದ ತಿಂಗಳಷ್ಟೇ ಆಲಿಯಾ ಭಟ್ ತಮ್ಮ ಮೊದಲ ಹಾಲಿವುಡ್ ಚಿತ್ರದ ಚಿತ್ರೀಕರಣಕ್ಕಾಗಿ ಯೂರೋಪ್ಗೆ ಹಾರಿದ್ದರು. ಈಗ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿ ಮತ್ತೆ ಭಾರತಕ್ಕೆ ವಾಪಸ್ಸಾಗಿದ್ದಾರೆ. ಈ ಬಗ್ಗೆ ಸಂಭ್ರಮದಿಂದ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಟಾಮ್ ಹಾರ್ಪರ್ ನಿರ್ದೇಶನದ ‘ಹಾರ್ಟ್ ಆಫ್ ಸ್ಟೋನ್’, ಗೂಢಾಚಾರಿ ಕಥಾಹಂದರದ ಚಿತ್ರ.
ಈ ಚಿತ್ರದಲ್ಲಿ ‘ವಂಡರ್ ವುಮನ್’ ನಟಿ ಗಾಲ್ ಗಡೋಟ್ ಜತೆ ಆಲಿಯಾ ಭಟ್ ಕೂಡ ಗೂಢಾಚಾರಿ ಪಾತ್ರದಲ್ಲಿ ನಟಿಸಿದ್ದಾರೆ. ಜೇಮಿ ಡೊರ್ನಾನ್, ಸೋಫಿ ಒಕೊನೆಡೊ, ಮಾಥಿಯಾಸ್ ಶ್ವೀಘೋಫರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಲಿಯಾ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಗಾಲ್ ಗಡೋಟ್ ಕೂಡ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಜೂನ್ ಅಂತ್ಯದಲ್ಲಿ ಗರ್ಭಿಣಿಯಾಗಿರುವ ಬಗ್ಗೆ ಹೇಳಿಕೊಂಡಿದ್ದ ಆಲಿಯಾ ಕೆಲವು ತಿಂಗಳುಗಳ ಕಾಲ ನಟನೆಯಿಂದ ದೂರ ಉಳಿಯಲಿದ್ದಾರೆ. ನಿರ್ವಣದಲ್ಲಿ ಒಲವು ತೋರಿರುವ ಆಲಿಯಾ, ‘ಡಾರ್ಲಿಂಗ್ಸ್’ ಎಂಬ ಚಿತ್ರವನ್ನು ಸದ್ದಿಲ್ಲದೆ ನಿರ್ವಿುಸಿದ್ದಾರೆ. ಈ ಚಿತ್ರ ಇದೇ ಆಗಸ್ಟ್ನಲ್ಲಿ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿರುವ ‘ಬ್ರಹ್ಮಾಸ್ತ್ರ’ ಸರಣಿಯ ಮೊದಲ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. -ಏಜೆನ್ಸೀಸ್