

ಬೆಂಗಳೂರು: ಸ್ಯಾಂಡಲ್ವುಡ್ ನಟಿಯರಾದ ನೇಹಾ ಶೆಟ್ಟಿ ಮತ್ತು ನಭಾ ನಟೇಶ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ತೆಲುಗಿನಲ್ಲಿ ಈ ಇಬ್ಬರು ನಟಿಯರ ಸಿನಿಮಾಗಳು ಈ ಶುಕ್ರವಾರ ಸದ್ದಿಲ್ಲದೆ ತೆರೆಕಂಡಿವೆ. ಆ ಚಿತ್ರಗಳಿಗೆ ಮೆಚ್ಚುಗೆಯೂ ಸಿಕ್ಕಿರುವುದರಿಂದ ಸಹಜ ಖುಷಿಯಲ್ಲಿದ್ದಾರೆ. ನೇಹಾ ಶೆಟ್ಟಿ ಕನ್ನಡದಲ್ಲಿ ಕಾಣಿಸದೇ ತುಂಬ ವರ್ಷಗಳೇ ಕಳೆದಿವೆ. 2016ರಲ್ಲಿ ತೆರೆಗೆ ಬಂದಿದ್ದ ‘ಮುಂಗಾರು ಮಳೆ 2’ ಚಿತ್ರದಲ್ಲಿ ನಟಿಸಿದ್ದನ್ನು ಬಿಟ್ಟರೆ, ಕನ್ನಡದಲ್ಲಿ ಅವರು ಖಾತೆ ತೆರೆದಿಲ್ಲ. ಟಾಲಿವುಡ್ನಲ್ಲಿಯೇ ಸೆಟಲ್ ಆಗಿ ‘ಮೆಹಬೂಬ’ ಸಿನಿಮಾದಲ್ಲಿ ನಟಿಸಿದರು. ಇದೀಗ ‘ಗಲ್ಲಿ ರೌಡಿ’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕನ್ನಡದ ಹಲವು ಕಥೆಗಳನ್ನು ಕೇಳಿದ್ದು, ಶೀಘ್ರದಲ್ಲಿ ಕಮ್್ಯಾಕ್ ಮಾಡುತ್ತಾರಂತೆ.
ಇದು ನೇಹಾ ಕಥೆಯಾದರೆ, ಡಿಸ್ನಿ ಹಾಟ್ಸ್ಟಾರ್ನಲ್ಲಿ ನಭಾ ನಟೇಶ್ ಅಭಿನಯದ ‘ಮ್ಯಾಸ್ಟ್ರೋ’ ಸಿನಿಮಾ ಬಿಡುಗಡೆಯಾಗಿದೆ. ಟಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ನಭಾಗಿದು ಮೊದಲ ಒಟಿಟಿ ಸಿನಿಮಾ. ಹಿಂದಿಯಲ್ಲಿ ತೆರೆಕಂಡು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದ ‘ಅಂಧಾಧುನ್’ ಚಿತ್ರವನ್ನೇ ತೆಲುಗಿನಲ್ಲಿ ರಿಮೇಕ್ ಮಾಡಲಾಗಿದೆ. ನಿತಿನ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಪೆರ್ಲಪಕ ಗಾಂಧಿ ನಿರ್ದೇಶನ ಮಾಡಿದ್ದಾರೆ.