ಪರೀಕ್ಷೆ ಬರೆದ ಸಾಯಿಪಲ್ಲವಿ

Sai Pallavi
Published on

‘ಪ್ರೇಮಂ’ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿರುವ ಸಾಯಿಪಲ್ಲವಿ ಅಭಿಮಾನಿ ಬಳಗ ದೊಡ್ಡದಿದೆ. ಅವರು ಹೋದಲ್ಲಿ, ಬಂದಲ್ಲಿ ಜನ ಅವರನ್ನು ಮಾತನಾಡಿಸುವುದಕ್ಕೆ, ಜತೆಗೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಲುವುದಕ್ಕೆ ಕಾಯುತ್ತಿರುತ್ತಾರೆ. ಹಾಗಿರುವಾಗ, ಸಾಯಿಪಲ್ಲವಿ ಸಹ ತಮ್ಮ ಮಧ್ಯದಲ್ಲೇ ಇದ್ದಾರೆ ಎಂದು ಗೊತ್ತಾಗಿಬಿಟ್ಟರೆ ಅವರ ಪರಿಸ್ಥಿತಿ ಹೇಗಾಗಬೇಡ? ಯಾಕೆ ಈ ಮಾತು ಎಂದರೆ, ಇತ್ತೀಚೆಗೆ ಸಾಯಿಪಲ್ಲವಿ, ತಿರುಚ್ಚಿಯ ಎಂಎಎಂ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ಬರೆದಿದ್ದಾರೆ.

ಯಾರಿಗೂ ಗೊತ್ತಾಗದ ಹಾಗೆ, ತಲೆಗೆ ದುಪ್ಪಟ್ಟ ಕಟ್ಟಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ಪರೀಕ್ಷೆ ಬರೆಯುವ ಸಮಯದಲ್ಲಿ, ಸಾಯಿಪಲ್ಲವಿ ತಮ್ಮ ಮುಖ ತೋರಿಸುತ್ತಿದ್ದಂತೆ, ಆಗ ಅವರ ಅಕ್ಕ-ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಜತೆಗೆ ಸೆಲ್ಪಿ ತೆಗೆಸಿಕೊಳ್ಳುವುದಕ್ಕೆ ಮುಗಿಬಿದ್ದಿದ್ದಾರೆ. ಅವರ ಅಭಿಮಾನ ಕಂಡು ಖುಷಿಯಾದ ಸಾಯಿಪಲ್ಲವಿ ಎಲ್ಲರ ಜತೆಗೆ ನಿಂತು ಫೋಸ್ ಕೊಟ್ಟಿದ್ದಾರೆ. ಈಗ ಆ ಫೋಟೋಗಳು ಇಂಟರ್​ನೆಟ್​ನಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net