

ರಾಜ್ಯದ ಎರಡನೇ ಅತಿದೊಡ್ಡ ನಗರ ಹುಬ್ಬಳ್ಳಿ. ವಾಣಿಜ್ಯ ನಗರಿ ಖ್ಯಾತಿಯ ಈ ಊರು ಬೆಳೆದ ಪರಿ ಅತ್ಯದ್ಭುತ. ಹೀಗಾಗಿಯೇ ದೇಶದ ವಾಣಿಜ್ಯ ರಾಜಧಾನಿಯ ಹೆಸರನ್ನೇ ಇದಕ್ಕೆ ಥಳಕು ಹಾಕಿದ್ದಾರೆ. ಇದೇ ‘ಛೋಟಾ ಬಾಂಬೆ’. ಈ ಹೆಸರನ್ನಾಧರಿಸಿ ಹುಬ್ಬಳ್ಳಿಯ ನಿರ್ವಪಕರೊಬ್ಬರು ಚಿತ್ರ ನಿರ್ವಿುಸಿದ್ದಾರೆ. ಉತ್ತರ ಕರ್ನಾಟಕದ ‘ಹೂಬಳ್ಳಿ’ ಹುಬ್ಬಳ್ಳಿಯಾಗಿ, ನಂತರ ‘ಛೋಟಾ ಬಾಂಬೆ’ ಆಗಿ ಪರಿವರ್ತನೆಗೊಂಡಿದ್ದೇ ರೋಚಕ. ವಾಣಿಜ್ಯ ವಹಿವಾಟಿಗೆ ಕೇಂದ್ರ ಸ್ಥಳವಾಗಿದ್ದ ಈ ಊರು ವಾಣಿಜ್ಯ ನಗರಿಯಾಗಿ ಬೆಳೆಯಿತು. ಈ ಊರು ಬೆಳೆಯುತ್ತ ಹೋದಂತೆ ಹಲವು ದೇಶ, ರಾಜ್ಯ, ಜಿಲ್ಲೆಗಳ ಜನರು, ಭಾಷಿಕರು, ಉದ್ಯಮಿಗಳು, ವಿದ್ವಾಂಸರು, ಸಾಹಿತಿಗಳು, ಪಂಡಿತರು, ರೌಡಿಗಳು... ಹೀಗೆ ಹಲವಾರು ರೀತಿಯ ಜನರನ್ನು ಒಳಗೊಳತ್ತ ಸಾಗಿತು. ಹಣದ ಹರಿದಾಟವೂ ಹೆಚ್ಚಿತು. ಇಲ್ಲಿಯ ಹಲವು ಪ್ರದೇಶಗಳ ಹೆಸರು ಕೇಳಿದರೆ ಇಂದಿಗೂ ಭೀತಿ ತಲೆದೋರುತ್ತದೆ. ಹುಬ್ಬಳ್ಳಿ ಬೆಳೆಯುತ್ತಿದ್ದಂತೆ ರೌಡಿಗಳ ಬಳಕೆ, ಸ್ವೇಚ್ಛಾಚಾರ, ಧಮಕಿ, ಕೊಲೆ, ಸುಪಾರಿಯಂಥ ಕೃತ್ಯಗಳು ಮೇರೆ ಮೀರಿದವು. ಇದೇ ಕಾರಣಕ್ಕೆ ಹುಬ್ಬಳ್ಳಿ ‘ಛೋಟಾ ಬಾಂಬೆ’ ಖ್ಯಾತಿ ಪಡೆಯಿತು. ಇದೇ ಹೆಸರನ್ನು 15 ವರ್ಷಗಳ ಹಿಂದೆ ನೋಂದಣಿ ಮಾಡಿಸಿ ಚಲನಚಿತ್ರ ನಿರ್ವಿುಸಲು ಉದ್ದೇಶಿಸಲಾಗಿತ್ತು. ಈಗ ನಿರ್ವಣವೆಲ್ಲ ಪೂರ್ಣಗೊಂಡು ಬಿಡುಗಡೆಯ ಹಂತ ತಲುಪಿದೆ. ಈಗ ಇದಕ್ಕೆ ಕರೊನಾ ಸೋಂಕಿನ ಪರದೆ ಅಡ್ಡಿಯಾಗಿದೆ ಅಷ್ಟೇ.
ಮೂಲ ಮುಂಬೈರೀತಿಯಲ್ಲಿ ಅಂಡರ್ವರ್ಲ್ಡ್ ಚಟುವಟಿಕೆಗಳು ಹುಬ್ಬಳ್ಳಿಯಲ್ಲಿ ನಡೆಯುತ್ತಿರುತ್ತವೆ. ಈ ‘ಛೋಟಾ ಬಾಂಬೆ’ಯಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಪ್ರಕರಣಗಳ ಹಿಂದಿರುವ ಡಾನ್ಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುತ್ತದೆ. ಇಲ್ಲಿಗೆ ಬಂದ ಪೊಲೀಸ್ ಅಧಿಕಾರಿಯೊಬ್ಬರು ಈ ಡಾನ್ಗಳ ಹೆಡೆಮುರಿ ಕಟ್ಟುವ ಬದಲು ಮನ ಪರಿವರ್ತನೆಗೊಳಿಸುತ್ತಾರೆ. ಅವರನ್ನೇ ಬಳಸಿಕೊಂಡು ‘ಛೋಟಾ ಬಾಂಬೆ’ಯನ್ನು ‘ಹೂಬಳ್ಳಿ’ಯಾಗಿ ಪರಿವರ್ತನೆ ಮಾಡುತ್ತಾರೆ. ಋಣಾತ್ಮಕತೆಯಿಂದ ಆರಂಭವಾಗುವ ಚಿತ್ರವು ಧನಾತ್ಮಕತೆಯತ್ತ ಪ್ರೇಕ್ಷಕರನ್ನು ಕೊಂಡೊಯ್ಯುತ್ತದೆ. ನವೀನ್ ಮೀಡಿಯಾ ಸಲ್ಯೂಷನ್ಸ್ನ ಜಿ.ಜಿ. ದ್ಯಾವನಗೌಡ್ರ ಅವರು ಪಿಆರ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾರಾಗಣ: ನಾಯಕರಾಗಿ ಸೂರಜ್ಸಾಸನೂರು, ಅಭಿಷೇಕ ಜಾಲಿಹಾಳ, ನಾಯಕಿಯರಾಗಿ ಯಶಸ್ವಿನಿ ಶೆಟ್ಟಿ, ಶನಾಯ ಕಾಟವೆ, ಪೊಲೀಸ್ ಅಧಿಕಾರಿಯಾಗಿ ಶಂಕರ ಅಶ್ವತ್ಥ.
ಕುಟುಂಬವೇ ಕುಳಿತು ನೋಡುವಂಥ ಚಲನಚಿತ್ರಗಳ ಅಭಿರುಚಿ ಉಳಿಸಿಕೊಂಡು ಹೋಗುವ ನಿರ್ದೇಶಕರ ಸಂಖ್ಯೆ ವಿರಳಾತಿವಿರಳ. ಈ ಸಾಲಿನಲ್ಲಿ ಸದ್ಯ ಕಾಣುವ ಹೆಸರು ಯುಸೂಫ್ ಖಾನ್. ಅದೇ ‘ಡಾನ್ ಖಾನ್’.ಇವರು ಮೂಲತಃ ಹುಬ್ಬಳ್ಳಿಯ ಬೆಂಗೇರಿಯವರು. ಬಡತನದಲ್ಲಿ ಅರಳಿದ ಪ್ರತಿಭೆ. ಬದುಕು ಸಾಗಿಸಲು ಆರ್ಕೆಸ್ಟ್ರಾದಲ್ಲಿ ಹಾಡಲು ತೆರಳುತ್ತಿದ್ದರು. ರಂಗ ನಿರ್ದೇಶಕ ಮೆಹಬೂಬ ನದಾಫ್ ಕರೆಯ ಮೇರೆಗೆ ‘ಪಾನಿ ಬೆಹರಹಾ ಹೈ’ ನಾಟಕದಲ್ಲಿ ಪಾತ್ರ ಮಾಡಿದರು. ‘ಸಿಂಹಾಸನ ಖಾಲಿ ಹೈ’ ನಾಟಕದಲ್ಲೂ ನಟಿಸಿದರು. ಉರ್ದು, ಹಿಂದಿ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುವುದರ ಜತೆಗೆ ಚಿತ್ರಕತೆಯನ್ನೂ ಬರೆಯುತ್ತಿದ್ದರು. ಕನ್ನಡದ ‘ನೀ ನನ್ನ ಜೀವ’ ಚಲನಚಿತ್ರದಲ್ಲಿ ಇನ್ಸ್ಪೆಕ್ಟರ್ ಖಾನ್ ಪಾತ್ರ ಮಾಡಿದರು. ತಾವೂ ಒಂದು ಚಲನಚಿತ್ರ ನಿರ್ವಿುಸಬೇಕೆಂಬ ತುಡಿತ ಶುರುವಾಯಿತು. 15 ವರ್ಷಗಳ ಹಿಂದೆಯೇ ‘ಛೋಟಾ ಬಾಂಬೆ’ ಹೆಸರನ್ನು ನೋಂದಾ ಯಿಸಿದ್ದರು. ಈಗ ಕಾಲ ಕೂಡಿ ಬಂದಿದೆ.
5 ಲಕ್ಷಕ್ಕೂ ಹೆಚ್ಚು ವೀಕ್ಷಣೆ: ಚಿತ್ರ ಸಾಹಿತ್ಯ, ನಟ-ನಟಿಯರು, ಸಂಗೀತ ನಿರ್ದೇಶನ ಸೇರಿ ಎಲ್ಲದರಲ್ಲೂ ಉತ್ತರ ಕರ್ನಾಟಕದ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ತುಂಬಾ ತುಂಬಾ ಪ್ರೀತಿಸುವೆ, ಚಡ್ಡಿ ದೋಸ್ತರು ನಾವು, ಕಾಮಣ್ಣನ ಮಕ್ಕಳು, ಸೀರೆ ಬಿಟ್ಟು, ಮನಸ್ಸಿನ ಗೋಡೆ ಮೇಲೆ... ಈ ಹಾಡುಗಳು ಸಾಕಷ್ಟು ಜನಪ್ರಿಯ ಆಗಿವೆ. ಯೂಟ್ಯೂಬ್ನಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.