More

    ‘ನೋ ಪಾರ್ಕಿಂಗ್’ ಬೋರ್ಡ್ ಇಲ್ಲ ಅಂತ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಜೋಕೆ…

    ಬೆಂಗಳೂರು: ‘ನೋ ಪಾರ್ಕಿಂಗ್​’ ಅಂತ ಬೋರ್ಡ್ ಇದ್ದುಬಿಟ್ಟರೆ ಬಹುತೇಕ ಯಾರೂ ಅಂಥ ಸ್ಥಳಗಳಲ್ಲಿ ತಮ್ಮ ವಾಹನ ನಿಲುಗಡೆ ಮಾಡುವುದಿಲ್ಲ. ಹಾಗಂತ ‘ನೋ ಪಾರ್ಕಿಂಗ್​’ ಬೋರ್ಡ್ ಇಲ್ಲ ಎಂದಮಾತ್ರಕ್ಕೆ ಎಲ್ಲೆಂದರಲ್ಲಿ ಪಾರ್ಕ್ ಮಾಡಿಬಿಟ್ಟರೆ ನಿಮ್ಮ ವಾಹನವನ್ನು ಸಂಚಾರ ಪೊಲೀಸರು ಎತ್ತಿಹಾಕಿಕೊಂಡು ಹೋಗುತ್ತಾರೆ.

    ಇತ್ತೀಚೆಗೆ ಟೋಯಿಂಗ್ ಸಿಬ್ಬಂದಿ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಅವರು ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ. ಟೋಯಿಂಗ್​ನವರಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅಂತ ಇದೆ. ಅದರ ಪ್ರಕಾರ ಅವರು ಕೆಲಸ ಮಾಡುತ್ತಾರೆ. ಅವರ ಕುರಿತು ಏನಾದರೂ ದೂರುಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ಅದರ ಬದಲು ವಾಹನ ಎತ್ತಿಕೊಂಡು ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಹಲ್ಲೆ ಮಾಡಬಾರದು. ಹಾಗೆ ಹಲ್ಲೆ ಮಾಡಿದವರ ವಿರುದ್ಧ ಈಗಾಗಲೇ ರೌಡಿಶೀಟರ್ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಪೊಲೀಸರಿಂದ ವಿಚಾರಣೆ ಎದುರಿಸಿದ ನಟಿ ರಚಿತಾ ರಾಮ್​; ಅಂದು ನಾನು ಅಲ್ಲಿರಲಿಲ್ಲ ಎಂದರು..

    ಇನ್ನು ವಾಹನಗಳ ಪಾರ್ಕಿಂಗ್ ಕುರಿತು ಕೂಡ ಅವರು ಒಂದಷ್ಟು ಸ್ಪಷ್ಟನೆಯನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇಲ್ಲ ಎಂದ ಮಾತ್ರಕ್ಕೆ ಎಲ್ಲೆಂದರಲ್ಲಿ ವಾಹನವನ್ನು ನಿಲ್ಲಿಸುವಂತಿಲ್ಲ. ರಾಜಧಾನಿಯಲ್ಲಿ 14 ಸಾವಿರ ಕಿಲೋಮೀಟರ್ ರಸ್ತೆ ಇದೆ. ಪ್ರತಿ ನೂರು ಕಿಲೋಮೀಟರ್​ಗೆ ಒಮ್ಮೆ ನೋ ಪಾರ್ಕಿಂಗ್ ಎಂದು ಫಲಕ ಹಾಕಲು ಸಾಧ್ಯವಿಲ್ಲ. ಹೀಗಾಗಿ ಪಾರ್ಕಿಂಗ್ ಅಂತ ಬೋರ್ಡ್ ಇರುವ ಜಾಗ ಹೊರತು ಪಡಿಸಿ ಉಳಿದೆಲ್ಲ ಸ್ಥಳಗಳೂ ನೋ ಪಾರ್ಕಿಂಗ್ ಅಂತಲೇ ಅರ್ಥ ಎಂಬುದಾಗಿ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

    ದಂಪತಿಯ ಕೊಲೆ, ಬಾಡಿಗೆಗೆ ಇದ್ದಿದ್ದವನೇ ಕೊಲೆಗಾರ; ವರಮಹಾಲಕ್ಷ್ಮೀ ಹಬ್ಬದಂದು ನಡೆದಿದ್ದ ಡಬಲ್​ ಮರ್ಡರ್​

    ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts