ಕಿರಣ್ ಈಗ ಭರ್ಜರಿ ಗಂಡು; ಚಿತ್ರದ ಶೀರ್ಷಿಕೆ ಬದಲಾವಣೆ

Bharjari Gandu
Published on

ಬೆಂಗಳೂರು: ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಕಿರಣ್ ರಾಜ್ ಹಿರಿತೆರೆಯಲ್ಲಿ ಈಗಾಗಲೇ ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರಣ್ ಅಭಿನಯದ ಹೊಸ ಚಿತ್ರವೊಂದರ ಚಿತ್ರೀಕರಣ ಮುಗಿದು, ಬಿಡುಗಡೆಗೆ ಸಿದ್ಧತೆ ನಡೆಸಿದೆ. ಹೀಗಿರುವಾಗಲೇ, ಆ ಚಿತ್ರದ ಶೀರ್ಷಿಕೆ ಬದಲಾಗಿದೆ. ಈ ಮೊದಲು ‘ಬಹದ್ದೂರ್ ಗಂಡು’ ಎಂದೇ ಅಂತಿಮವಾಗಿದ್ದ ಶೀರ್ಷಿಕೆ, ಇದೀಗ ‘ಭರ್ಜರಿ ಗಂಡು’ ಎಂದು ಬದಲಾಗಿದೆ.

ಪ್ರಸಿದ್ಧ್ ನಿರ್ದೇಶನದ ಈ ಚಿತ್ರದಲ್ಲಿ ಎರಡು ಶೇಡ್​ಗಳಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಲುವಾಗಿ ದೇಹವನ್ನು ಹುರಿಗೊಳಿಸಿರುವ ಅವರು, ದೊಣ್ಣೆ ವರಸೆ ಸಾಹಸದಲ್ಲಿ ಮಿಂಚಿದ್ದಾರೆ. ಪ್ರಸಿದ್ಧ್ ಜತೆಗೆ ಮದನ್ ಗೌಡ ಮತ್ತು ಅನಿಲ್ ಕುಮಾರ್ ಚಿತ್ರದ ನಿರ್ವಣದಲ್ಲಿ ಕೈಜೋಡಿಸಿದ್ದಾರೆ. ಕಿರಣ್​ಗೆ ಜೋಡಿಯಾಗಿ ಯಶಾ ಶಿವಕುಮಾರ್ ನಟಿಸಿದರೆ, ರಮೇಶ್ ಭಟ್, ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವೆಂಕಿ ಸಂಕಲನ ಮಾಡಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net