ಇಲ್ಲಿಂದ ಆರಂಭವಾಗಿದೆ...; ಅಣ್ಣಾವ್ರ ಮೇಲಿನ ಅಪ್ಪಟ ಅಭಿಮಾನ..

Illinda Aarambhavagide
Published on

ಈ ಚಿತ್ರದ ನಿರ್ಮಾಪಕರು ಪಕ್ಕದ ತೆಲುಗಿನವರು. ಕಥೆ ಬರೆಯುವುದರ ಜತೆಗೆ ವಿಶೇಷ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಅಣ್ಣಾವ್ರ ಮೇಲಿನ ಅಪ್ಪಟ ಅಭಿಮಾನಕ್ಕೆ ಅವರ ಹೆಸರನ್ನೇ ಆಧರಿಸಿ ಸಿಐಡಿ ಪಾತ್ರ ಮಾಡಿದ್ದಾರೆ. ಈ ಚಿತ್ರದ ಹೆಸರು ‘ಇಲ್ಲಿಂದ ಆರಂಭವಾಗಿದೆ’. ಶೀರ್ಷಿಕೆಯೇ ಹೇಳುವಂತೆ ಇಲ್ಲಿ ಹೊಸದೊಂದು ಶುರುವಾಗಿದೆ. ಇತ್ತೀಚೆಗಷ್ಟೇ, ಈ ಚಿತ್ರದ ಮೂರು ಹಾಡು ಮತ್ತು ಟ್ರೇಲರ್ ಬಿಡುಗಡೆ ಆಗಿದೆ. ಲಕ್ಷ್ಮಣ ಚಪರ್ಲ ಈ ಚಿತ್ರದ ನಿರ್ದೇಶಕರು.

ಸಸ್ಪೆನ್ಸ್ ಹಾರರ್ ಶೈಲಿಯ ಈ ಸಿನಿಮಾದಲ್ಲಿ ನವಿರಾದ ಪ್ರೀತಿಯನ್ನು ನಿರ್ದೇಶಕರು ಬೆಸೆದಿದ್ದಾರೆ. ಕೀರ್ತಿ ಕೃಷ್ಣ ನಾಯಕನಾಗಿ ನಟಿಸಿದರೆ, ನಿಖಿತಾ ಸ್ವಾಮಿ, ಮಧುಬಾಲಾ ಅವರಿಗೆ ಜೋಡಿಯಾಗಿದ್ದಾರೆ. ಸಯ್ಯಾಜಿ ಶಿಂಧೆ, ದೇವಗಿಲ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಜ್ಕಿರಣ್ ಸಂಗೀತ, ಜಯರಾಮ್ ಛಾಯಾಗ್ರಹಣ, ಸೀನು ಸಂಕಲನ, ಗೋಪಿಕಿರಣ್ ಸಂಭಾಷಣೆ ಬರೆದಿದ್ದಾರೆ. ಸಿರಿ ಮ್ಯೂಸಿಕ್​ನಲ್ಲಿ ಹಾಡುಗಳು ಹೊರಬಂದಿದ್ದು, ಶೀಘ್ರದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net