

ಡೋಂಟ್ ಟ್ರಬಲ್ ದ ಟ್ರಬಲ್ ಫಹಾದ್ ಫಾಸಿಲ್ ಹೊಸ ಸಿನಿಮಾ
2026ಅಕ್ಟೋಬರ್ 2ರಂದು ಬೆಳ್ಳಿ ತೆರೆ ಮೇಲೆ ಅಬ್ಬರ
ಮತ್ತೊಂದು ಫೀಲ್ ಗುಡ್ ಸಿನಿಮಾ ಎಂದ ಡೋಂಟ್ ಟ್ರಬಲ್ ದ ಟ್ರಬಲ್ ಟ್ರೇಲರ್ ವೀಕ್ಷಕರು
Don't Trouble The Trouble: ಆವೇಶಂ ಸಿನಿಮಾ ಮೂಲಕ ಬ್ಲಾಕ್ ಬ್ಲಷ್ಟರ್ ನಗು ಕೊಟ್ಟಿದ್ದ ಮಾಲಿವುಡ್ ನಟ ಫಹಾದ್ ಫಾಸಿಲ್ ಸದ್ಯ ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾ ಮೂಲಕ ಮತ್ತೆ ಹೊಸ ಅವತಾರ ತಾಳಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದ್ದು, ಅಕ್ಟೋಬರ್ 2, 2026 ರಂದು ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ.
ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇದರಲ್ಲಿ ಫಹಾದ್ ಫಾಸಿಲ್ ಅವರನ್ನು ಜಾದೂಗಾರನಾಗಿ ಪರಿಚಯಿಸಲಾಗಿದೆ. ಜನರನ್ನು ಮೋಸಗೊಳಿಸಿ ಹಣ ದೋಚೋದು ಸಮಸ್ಯೆಗಳಿಂದ ಕುತಂತ್ರವಾಗಿ ತಪ್ಪಿಸಿಕೊಳ್ಳುವುದು ಈತನ ಬುದ್ಧಿ. ಇದೇ ಸೂರಿ ಬದುಕಿಗೆ ಬಾಲಕಿಯೊಬ್ಬಳು ಅಚಾನಕ್ಕಾಗಿ ಪ್ರವೇಶ ಪಡೆಯುತ್ತಾಳೆ. ಆಕೆಗೆ ನಿಜವಾಗಿಯೂ ಅಲೌಕಿಕ ಶಕ್ತಿ ಇರುತ್ತದೆ.
ಆಕೆ ತನ್ನ ತಂದೆ-ತಾಯಿಯನ್ನು ಪತ್ತೆ ಹಚ್ಚಲು ಸೂರಿ ಸಹಾಯ ಬೇಕಾಗುತ್ತದೆ. ಮೊದಲಿಗೆ ಆಕೆಯ ವಿಶೇಷ ಮ್ಯಾಜಿಕ್ ಅನ್ನು ದುರುಪಯೋಗಪಡಿಸಿಕೊಳ್ಳುವ ಆತ, ನಂತರ ಬಾಲಕಿಯ ಕಷ್ಟ ತಿಳಿದು ಜೊತೆಯಾಗುತ್ತಾನೆ. ಪೋಷಕರಿಗೆ ಹುಡುಕಾಡುವಾಗ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತದೆ. ಆಕೆಯೊಂದಿಗಿನ ಭಾವನಾತ್ಮಕ ಸಂಬಂಧವು ಹೆಚ್ಚು ಗಮನ ಸೆಳೆಯುವಂತೆ ಮಾಡುತ್ತದೆ.
ಸಿನಿಮಾದ ಟ್ರೇಲರ್ ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಆವೃತ್ತಿಯಲ್ಲಿ ಮೋಹನ್ ಲಾಲ್ ಧ್ವನಿ ನೀಡಿದ್ದರೆ, ತಮಿಳು ಆವೃತ್ತಿಗೆ ಕಮಲ್ ಹಾಸನ್ ಧ್ವನಿ ನೀಡಿದ್ದಾರೆ. ತೆಲುಗು ಆವೃತ್ತಿಯಲ್ಲಿ ಬಾಲಯ್ಯ ಅವರ ಧ್ವನಿ ಇದೆ. ಬಾಲಯ್ಯ ನಿರೂಪಣೆಯ ಟ್ರೇಲರ್ ಫ್ಯಾನ್ಸ್ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಡೋಂಟ್ ಟ್ರಬಲ್ ದಿ ಟ್ರಬಲ್, ಇಫ್ ಯು ಟ್ರಬಲ್ ದಿ ಟ್ರಬಲ್, ಟ್ರಬಲ್ ಟ್ರಬಲ್ಸ್ ಯೂ ಎನ್ನುವುದು 2012ರ 'ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರ ಫೇಮಸ್ ಡೈಲಾಗ್ ಆಗಿದೆ. ಸಾಕಷ್ಟು ಟ್ರೋಲ್ ಪೇಜಸ್ಗಳು, ವ್ಲಾಗ್ಗಳಿಗೆ ಈ ವಿಡಿಯೋವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Pushpa ದುರಂತದಿಂದ ಎಚ್ಚೆತ್ತ ನಾನಿ; ಫ್ಯಾನ್ಸ್ ಜೊತೆ 'The Paradise' ನೋಡಲು ಪೊಲೀಸ್ ಭದ್ರತೆಗೆ ಮನವಿ, ಸಿಎಂ ಹೀಗಂದ್ರು
ಆವೇಶಂ ನಂತ್ರ ಮತ್ತೊಂದು ಹಿಟ್
ಆವೇಶಂ ಸಿನಿಮಾದಲ್ಲಿ ಬೆಂಗಳೂರಿಗೆ ಬರುವ ಎಂಜಿನಿಯರ್ ವಿದ್ಯಾರ್ಥಿಗಳು ಸ್ಥಳೀಯ ರೌಡಿಯೊಂದಿಗೆ ಕನೆಕ್ಟ್ ಆಗುವ ರೀತಿ ಆತನಿಂದ ತಪ್ಪಿಸಿಕೊಳ್ಳಲು ಪಡುವ ಫಜೀತಿಯನ್ನು ಕಾಮಿಡಿ ಸೀನ್ಗಳ ಮೂಲಕ ಕಟ್ಟಿಕೊಡಲಾಗಿದೆ. ಈ ಚಿತ್ರವು ಸಿನಿಮಾ ಥಿಯೇಟರ್ ಹಾಗೂ ಒಟಿಟಿಯಲ್ಲಿ ಭಾರಿ ವೀಕ್ಷಣೆ ಗಳಿಸಿತ್ತು. ಫಹಾದ್ ಅವರ ಮ್ಯಾನರಿಸಂ ಎಲ್ಲರನ್ನು ನಕ್ಕು ನಲಿದು ಹೊಟ್ಟೆ ಹುಣ್ಣಾಗಿಸುವಂತೆ ಮಾಡಿತ್ತು. ಇದು ಅಂತದ್ದೇ ಒಂದು ಸಿನಿಮಾ ಎಂದು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಟ್ರೇಲರ್ ಹಂಚಿಕೊಂಡ ಪತ್ನಿ ನಜ್ರಿಯಾ
ಫಹಾದ್ ಪತ್ನಿ ನಜ್ರಿಯಾ ಅವರು ಇನ್ಸ್ಟಾ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಟ್ರೇಲರ್ ಹಂಚಿಕೊಂಡು ಕಾಂಟ್ ವೇಟ್ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).