ಮೆಲೋಡಿ ಕ್ರೇಜ್‌ಗೆ ಬಿದ್ದ ಸೋನಾಕ್ಷಿ-ಜಹೀರ್; ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ ದಂಪತಿಯ ಕ್ಯೂಟ್ ವಿಡಿಯೋ.. Sonakshi Sinha

Sonakshi Sinha ಚಿತ್ರ Instagram
Sonakshi Sinha ಚಿತ್ರ Instagram
Published on
Sonakshi Sinha: ಬಾಲಿವುಡ್‌ನ ದಂಪತಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸದಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮೋಜಿನ ಪೋಸ್ಟ್​ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗೆ ಇಂಟರ್ನೆಟ್​ನಲ್ಲಿ ವೈರಲ್​ ಆಗುತ್ತಿರುವ 'ಮೆಲೊಡಿ' ಮೀಮ್ ಟ್ರೆಂಡ್​ನ್ನೂ ಕೂಡಾ ಈ ಜೋಡಿ ಬಿಟ್ಟುಕೊಟ್ಟಿಲ್ಲ. ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ವೊಂದನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. 
ಸೋನಾಕ್ಷಿ ಮತ್ತು ಜಹೀರ್ ಬುಧವಾರ ತಮ್ಮ ಜಂಟಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಈ ತಮಾಷೆಯ ಕ್ಲಿಪ್, ಕೇವಲ ಒಂದು ಮೋಜಿನ ವಿಡಿಯೋ ಮಾತ್ರವಲ್ಲ; ಇದು ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಸಿಸ್ಟಮ್' ಬಿಡುಗಡೆಗೆ ಸ್ವಲ್ಪ ಮೊದಲು ಹೊರಬಂದಿರುವುದು ವಿಶೇಷ! ಚಿತ್ರದ ಪ್ರಚಾರದ ನಡುವೆಯೂ ಈ ಜೋಡಿ ಇಂಟರ್ನೆಟ್ ಟ್ರೆಂಡ್‌ಗೆ ಸಪ್ರೈಸ್ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ವಿಡಿಯೋದಲ್ಲೇನಿದೆ?

ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಸೋನಾಕ್ಷಿ ತಮ್ಮ ಪತಿಯನ್ನು ಏನನ್ನು ಕೇಳಲು ಬಯಸುತ್ತೀಯಾ? ಎಂದು ಕೇಳುತ್ತಾರೆ. ಇದಕ್ಕೆ ಅವರು, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ನಿನಗೆ ನಿಖರವಾಗಿ ತಿಳಿದಿದೆ ಎಂದು ಉತ್ತರಿಸುತ್ತಾರೆ. ನಂತರ ಸೋನಾಕ್ಷಿ ಅಷ್ಟಕ್ಕೆ ಸುಮ್ಮನಾಗದೇ, ಇಲ್ಲ ಹಾಗಾದರೆ ಎಂದು ತಮಾಷೆ ಮಾಡುತ್ತಾರೆ. ಕೆಲವು ಕ್ಷಣಗಳ ನಂತರ ಜಹೀರ್​ ಮೆಲೋಡಿ ಚಾಕಲೇಟ್​ನ್ನು ತಮ್ಮ ಜೇಬಿನಿಂದ ತೆಗೆದು ಮೆಲೋಡಿ ತಿನ್ನು, ನೀನೇ ತಿಳಿದುಕೊ ಎಂದು ಹೇಳುತ್ತಾರೆ. 
ಈ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಅವರಿಬ್ಬರ ಕೆಮಿಸ್ಟ್ರಿಗೆ ಅನೇಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸೆಲೆಬ್ರಿಟಿಗಳು ಅದೇ ಮೀಮ್ ಸ್ವರೂಪವನ್ನು ಮರುಸೃಷ್ಟಿಸುವ ಬದಲು ವೈರಲ್ ಟ್ರೆಂಡ್‌ನಲ್ಲಿ ತಮ್ಮದೇ ಆದ ಸ್ಪಿನ್ ಹಾಕುವುದನ್ನು ನೋಡಿ ಆನಂದಿಸುವುದಾಗಿ ಹಲವಾರು ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ.

ಮೆಲೊಡಿ (Melodi) ಟ್ರೆಂಡ್ ಶುರುವಾಗಿದ್ದು ಹೇಗೆ?

ಈ ಚಾಕೊಲೇಟ್ ಕೇವಲ ಮೀಮ್ ಆಗಿ ಬದಲಾಗಿದ್ದು 2023ರ ದೆಹಲಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ. ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಮೆಲೋನಿ ಒಟ್ಟಿಗೆ ನಗುತ್ತಿರುವ ಫೋಟೋಗಳು ವೈರಲ್ ಆದಾಗ, ನೆಟ್ಟಿಗರು ಅವರಿಬ್ಬರ ಹೆಸರನ್ನು (Modi + Meloni) ಸೇರಿಸಿ Melodi ಎಂದು ಕರೆಯಲು ಆರಂಭಿಸಿದರು.
ಸಾಮಾನ್ಯವಾಗಿ ರಾಜಕಾರಣಿಗಳು ಇಂತಹ ಜೋಕ್‌ಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ 2024ರ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೆಲೋನಿ ಅವರೇ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿ, ಅದಕ್ಕೆ #Melodi ಎಂದು ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದರು. ಇದು ಇಂಟರ್ನೆಟ್ ಲೋಕದಲ್ಲಿ ಇತಿಹಾಸ ಸೃಷ್ಟಿಸಿತು.

ರೋಮ್ ಸಭೆಯಲ್ಲಿ ಅಚ್ಚರಿಯ ಉಡುಗೊರೆ!

ಈ ವಾರ ಇಟಲಿಯ ರೋಮ್‌ನಲ್ಲಿ ನಡೆದ ಉಭಯ ದೇಶಗಳ ನಾಯಕರ ಸಭೆಯಲ್ಲಿ ಈ ಇಂಟರ್ನೆಟ್ ಮೀಮ್‌ಗೆ ಅಧಿಕೃತ ಸಿಹಿ ಸಿಕ್ಕಿತು. ಪ್ರಧಾನಿ ಮೋದಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೊಡಿ ಚಾಕೊಲೇಟ್ ಪ್ಯಾಕೆಟ್‌ಗಳನ್ನು ಗಿಫ್ಟ್ ಆಗಿ ನೀಡಿದರು. ಮೆಲೋನಿ ಮೋದಿಯವರಿಗೆ ಧನ್ಯವಾದ ತಿಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ ಇಂಟರ್ನೆಟ್ ಲೋಕ ಧೂಳೆಬ್ಬಿಸಿತು (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net