EKKA Review; ಮಗುವಾಗಿದ್ದ ಮುತ್ತು, ಮೃಗರಾಜನಾಗುವ ಕಥೆ!

asc
Published on

ಚಿತ್ರ: ಎಕ್ಕ

ನಿರ್ದೇಶನ: ರೋಹಿತ್​ ಪದಕಿ

ತಾರಾಗಣ: ಯುವರಾಜಕುಮಾರ್​, ಸಂಪದ, ಸಂಜನಾ, ಪೂರ್ಣ ಮೈಸೂರು, ಆದಿತ್ಯ, ಶ್ರುತಿ, ಅತುಲ್​ ಕುಲಕರ್ಣಿ, ಪುನೀತ್​ ರುದ್ರನಾಗ್​ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಆತ ಮುತ್ತುರಾಜ್​ (ಯುವ). ರತ್ನಮ್ಮನ (ಶ್ರುತಿ) ಮುದ್ದು ಮಗ, ಪಾರ್ವತಿಪುರದ ಪೋಲಿ ಹುಡುಗ. ಸ್ನೇಹಿತರ ಜತೆ ಓಡಾಡಿಕೊಂಡಿರುತ್ತೇನೆ. ಎಲೆಯಾಟದಲ್ಲಿ (ಇಸ್ಪೀಟ್​) ನಿಸ್ಸೀಮ. ಗೆಳೆಯ ರಮೇಶನಿಗೆ <20 ಸಾಲ ಕೊಡಿಸಲು, ಶೂರಿಟಿ ಹಾಕಿ ಬಡ್ಡಿ ಮಂಜಣ್ಣನ ಕೆಂಗಣ್ಣಿಗೆ ಗುರಿಯಾಗಿ ಊರಲ್ಲಿರುವ ಒಂದು ಮನೆಯನ್ನೂ ಕಳೆದುಕೊಳ್ಳುವ ದುಸ್ಥಿತಿಗೆ ಸಿಲುಕಿಕೊಳ್ಳುತ್ತಾನೆ ಮುತ್ತು. ರಮೇಶ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ ಅಂತ ತಿಳಿದು, ಆರು ತಿಂಗಳಲ್ಲಿ ಅವನನ್ನು ಹುಡುಕಿ, ಹಣ ವಾಪಸ್​ ಕೊಡುವುದಾಗಿ ಹೇಳಿ ಮುತ್ತು ಊರು ಬಿಡುತ್ತಾನೆ. ಕೆಲಸಕ್ಕೆ ಅಂತ ನಿಂದ್ರೆ ಗಡಿ, ಗಡಿಯಾರ ಎರಡನ್ನೂ ನೋಡಲ್ಲ ಅಂತ ಹಗಲು, ರಾತ್ರಿ ಡೆವಿಂಗ್​ ಕೆಲಸಕ್ಕೆ ಸೇರುವ ಮುತ್ತು, ವ್ಯಕ್ತಿಯೊಬ್ಬನಿಗೆ ಡ್ರಾಪ್​ ಕೊಡಲು ಹೋಗಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಹೀಗೆ "ಯಾರನ್ನೋ ಹುಡುಕೋಕೆ ಅಂತ ಬಂದು, ತಾನೇ ಕಳೆದುಹೋಗ್ತಾನೆ'. "ಎಕ್ಕ' ಟ್ರೇಲರ್​ನಲ್ಲೇ ಚಿತ್ರದ ಕಥೆ ಹೇಳಲಾಗಿದೆ. ಆದರೆ, ಮುತ್ತು ಹೇಗೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ? ಹೇಗೆ ಅದರಿಂದ ಹೊರಗೆ ಬರುತ್ತಾನೆ? ಏನಾಗುತ್ತಾನೆ? ಎಂಬುದನ್ನು ತಿಳಿಯಲು ಸಿನಿಮಾ ನೋಡಿ.

ರೋಹಿತ್​ ಪದಕಿಯ "ರತ್ನನ್​ ಪ್ರಪಂಚ'ದಂತೆಯೇ "ಎಕ್ಕ'ದಲ್ಲೂ ಒಂದು ಜರ್ನಿ ಇದೆ. ವಾರಾಣಸಿಯಿಂದ ಪ್ರಾರಂಭವಾಗುವ ಕಥೆ, ್ಲ್ಯಾಶ್​ಬ್ಯಾಕ್​ಗೆ ಹೋಗಿ ಪಾರ್ವತಿಪುರ, ಬೆಂಗಳೂರನ್ನು ಸುತ್ತಾಡಿಸಿ ಮತ್ತೆ ಪ್ರೆಸೆಂಟ್​ನಲ್ಲಿ ಅಂತ್ಯವಾಗುತ್ತದೆ. ಪಾತ್ರಗಳ ಜತೆ ಕಥೆಯೂ ಪಯಣಿಸುತ್ತದೆ. ಈ ಜರ್ನಿಯಿಂದಲೇ ಮೊದರ್ಲಧ ಪ್ರೇಕ್ಷಕರಿಗೆ ಆಪ್ತವಾಗುತ್ತದೆ. ಆದರೆ, ಮುತ್ತು ಬೆಂಗಳೂರು ಅಂಡರ್​ವರ್ಲ್ಡ್​ ಆಳಕ್ಕೆ ಇಳಿದಂತೆ ದ್ವೀತಿಯಾರ್ಧ ಸ್ವಲ್ಪ ನಿಧಾನ ಅಂತನ್ನಿಸಿದರೂ ನೋಡಿಸಿಕೊಂಡು ಹೋಗುತ್ತದೆ. ತಾಯಿ&ಮಗನ ಸೆಂಟಿಮೆಂಟ್​, ಗೆಳೆತನ, ಪ್ರೀತಿ, ಸೇಡು, ಆ್ಯಕ್ಷನ್​, ಸಸ್ಪೆನ್ಸ್​, ಎಮೋಷನ್ಸ್​... ಹೀಗೆ ಒಂದು ಕಮರ್ಷಿಯಲ್​ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳೂ "ಎಕ್ಕ'ದಲ್ಲಿವೆ. ಅದರ ಜತೆಗೆ ಬೆಂಗಳೂರಿನ ಈಗಿನ ರಿಯಲ್​ ಎಸ್ಟೇಟ್​, ಸುಲಿಗೆ, ಆಯಿಲ್​, ಗಾರ್ಬೇಜ್​ ಮಾಫಿಯಾವನ್ನೂ ಇಲ್ಲಿ ಕಾಣಬಹುದು.

ಚರಣರಾಜ್​ ಸಂಗೀತದ "ಎಕ್ಕಾ ಮಾರ್​', "ಬ್ಯಾಂಗಲ್​ ಬಂಗಾರಿ' ಈಗಾಗಲೇ ಹಿಟ್​ ಆಗಿದ್ದು, ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಪೂರಕವಾಗಿವೆ. "ಯುವ'ಗೆ ಹೋಲಿಸಿದರೆ ಯುವ ಇಲ್ಲಿ ಮಾಗಿದ್ದಾರೆ. ಪಾತ್ರಕ್ಕೆ ತಾತನ ಹೆಸರಿರುವ ಕಾರಣವೋ ಗೊತ್ತಿಲ್ಲ. ಆದರೆ, ಮುತ್ತುರಾಜನ ಪಾತ್ರವನ್ನು ಜೀವಿಸಿದ್ದಾರೆ. ಆ್ಯಕ್ಷನ್​, ಡಾನ್ಸ್​ ಜತೆಗೆ ನವರಸಗಳನ್ನೂ ಅವರ ಮುಖದಲ್ಲಿ ಕಾಣಬಹುದು. ಸಂಜನಾ "ಸಲಗ' ನೆನಪಿಸಿದರೆ, ಸಂಪದಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಡ್ಯಾಡಿ ಪೂರ್ಣ, ಒಂಟೆ ಸೀನ ಪುನೀತ್​, ಪೊಲೀಸ್​ ಅಧಿಕಾರಿ ದುರ್ಗಾ ಪ್ರಸಾದ್​ ಪಾತ್ರದಲ್ಲಿ ಆದಿತ್ಯ ಗಮನ ಸೆಳೆಯುತ್ತಾರೆ. ಒಟ್ಟಾರೆ, ಸಿನಿಮಾ ನೋಡಿದ ಪ್ರೇಕ್ಷಕರಿಗೆ "ಎಕ್ಕ' ಪೈಸಾ ವಸೂಲ್​ ಪಕ್ಕಾ!

ಸ್ಟಾರ್​: 3.5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net