ನಿನ್ನ ಗುಪ್ತಾಂಗ ತೋರಿಸಿದರೆ, ನೀನೇ ನಾಯಕ; ಬಾಲಿವುಡ್​ ನಟನಿಗೆ ಎದುರಾಗಿತ್ತು ಸಂದಿಗ್ಧ ಸ್ಥಿತಿ!

ayushmann-khurrana-1568429089
Published on

ಆಯುಷ್ಮಾನ್​ ಖುರಾನಾ, ಬಾಲಿವುಡ್​ನ ಸ್ಟಾರ್ ನಟ. ಸದ್ಯದ ಅವರ ಸಿನಿಮಾ ಗಳಿಕೆ ವಿಚಾರವನ್ನು ಅಳತೆಗೋಲಿನಲ್ಲಿ ನೋಡುವುದಾದರೆ, ಅವರ ಪ್ರತಿ ಚಿತ್ರವೂ ಹಿಟ್​! ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಾಲಿವುಡ್​ನಲ್ಲಿ ಸ್ಟಾರ್​ಗಳ ನಡುವೆ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಆ ಕಷ್ಟದ ಹಾದಿಯನ್ನೂ ಸವೆಸಿ ಇದೀಗ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹಲವು ಅವಮಾನ ಅಡೆತಡೆಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ಆ ಎಲ್ಲ ಅವಮಾನಗಳಲ್ಲಿ ಇಂದಿಗೂ ಕಾಡುವ ಬಹು ಕೆಟ್ಟ ಘಟನೆ ಎಂದರೆ ಅದು ಕಾಸ್ಟಿಂಗ್​ ಕೌಚ್​!

ಸಿನಿಮಾಕ್ಕೆ ಬರುವುದಕ್ಕೂ ಮುನ್ನ, ರಿಯಾಲಿಟಿ ಶೋಗಳಲ್ಲಿ ಆ್ಯಂಕರ್​ ಆಗಿ, ಐಪಿಎಲ್​ ಹೋಸ್ಟ್ ಆಗಿ, ರೇಡಿಯೋ ಜಾಕಿಯಾಗಿ ಬಗೆಬಗೆ ಕ್ಷೇತ್ರಗಳಲ್ಲಿ ಆಯುಷ್ಮಾನ್​ ಗುರುತಿಸಿಕೊಂಡಿದ್ದರು. ಅದೇ ಜನಪ್ರಿಯತೆಯನ್ನಿಟ್ಟುಕೊಂಡು ಸಿನಿಮಾಕ್ಕೆ ಬರಲು ನಿರ್ಧರಿಸಿದ್ದರು. ಆಗಾಗ ಸಿನಿಮಾ ಆಡಿಷನ್​ಗೆ ಹಾಜರಿ ಹಾಕಿ ಬರುತ್ತಿದ್ದರು. ಆಗ ನಡೆದ ಕಹಿ ಘಟನೆಯನ್ನು ಅವರೇ ಹೇಳಿಕೊಂಡಿದ್ದಾರೆ.

‘ಆವತ್ತೊಂದಿನ ಹೆಸರು ಹೇಳಲಿಚ್ಛಿಸದ ನಿರ್ಮಾಪಕರ ಸಿನಿಮಾದ ಆಡಿಷನ್​ ನಡೆಯುತ್ತಿತ್ತು. ಕಾಸ್ಟಿಂಗ್ ಡೈರೆಕ್ಟರ್ ಬಳಿ ಹೋದಾಗ, ‘ನಾನು ನಿನ್ನ ಗುಪ್ತಾಂಗ ನೋಡಬಹುದಾ? ನಿನ್ನ ಗುಪ್ತಾಂಗ ತೋರಿಸಿದರಷ್ಟೇ ನೀನು ಈ ಸಿನಿಮಾದಲ್ಲಿ ನಾಯಕನಾಗಿ ಮುಂದುವರಿಯಲು ಸಾಧ್ಯ ಎಂಬ ಪ್ರಶ್ನೆ ನನಗೆದುರಾಗಿತ್ತು. ನಾನು ಏನು ಮಾತನಾಡುತ್ತಿದ್ದೀರೆಂದು ಅರಿವಿದೆಯೇ ನಿಮಗೆ? ಆರ್ ಯೂ ಸೀರಿಯಸ್! ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದೆ’ ಎಂದು ಅಂದಿನ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಸದ್ಯ ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ಆಯುಷ್ಮಾನ್​ ಬಿಜಿಯಾಗಿದ್ದಾರೆ. ಹೊಸ ಹೊಸ ಪಾತ್ರಗಳ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net