ಆ್ಯಕ್ಷನ್, ಲವ್, ದಾಂಪತ್ಯ, ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್, ಆಳವಾದ ಮತ್ತು ಮಹತ್ವದ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನೇ ಜನರ ಮುಂದಿಟ್ಟು, ಅದರಲ್ಲಿ ಗೆಲುವು ನೋಡುವುದು ಮಾಲಿವುಡ್ಗೆ ಒಂದು ರೀತಿ ನೀರು ಕುಡಿದಷ್ಟೇ ಸಲೀಸು. ಇದು ದೆವ್ವದ ಕಥೆಗಳಿಗೂ ಅನ್ವಯಿಸುತ್ತದೆ. ಹಾರರ್-ಥ್ರಿಲ್ಲರ್, ಸಸ್ಪೆನ್ಸ್ ಸ್ಟೋರಿಗಳಲ್ಲಿಯೂ ಸಕ್ಸಸ್ ಕಂಡಿರುವ ಮಲಯಾಳಂ, ಇಂತಹ ಕಥೆಗಳನ್ನು ಇಷ್ಟಪಡುವ ವರ್ಗಕ್ಕೂ ತಮ್ಮ ಸಿನಿಮಾಗಳಲ್ಲಿ ಸೆಳೆಯುವಂತ ವಿಷಯಗಳನ್ನು ಅಡಗಿಸಿದೆ. ಈ ಮೂಲಕ ಹಾರರ್ ಜಾನರ್ ಲೈಕ್ ಮಾಡುವ ಸಿನಿಪ್ರಿಯರಿಗೂ ಮನರಂಜನೆಗೆ ಮೋಸವಿಲ್ಲ.