"ಹೌದು, ನಾನು 'ದಿಮಾಗಿ ನಕ್ಸಲ್'!" ಜಾಮಿಯಾ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಕೇಂದ್ರದ ವಿರುದ್ಧ ಗುಡುಗಿದ ನಸೀರುದ್ದೀನ್ ಶಾ! Naseeruddin Shah

Bollywood veteran actor Naseeruddin Shah
ಬಾಲಿವುಡ್ ಹಿರಿಯ ನಟ ನಸೀರುದ್ದೀನ್ ಶಾ
Published on: 

ನವದೆಹಲಿ: ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್​ ಚುನಾವಣೆಯನ್ನು ನಡೆಸುವಂತೆ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಾ, ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಈಗ, ಈ ಹೋರಾಟಕ್ಕೆ ಹಾಗೂ ಪ್ರತಿಭಟನಾಕಾರರ ಬೆಂಬಲಕ್ಕೆ ಬಾಲಿವುಡ್​ ಹಿರಿಯ ನಟ ನಸೀರುದ್ದೀನ್ ಶಾ ನಿಂತಿದ್ದು. ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿಗಳ ವಿರುದ್ಧ ವಿಡಿಯೋವೊಂದರಲ್ಲಿ ಹರಿಹಾಯ್ದಿದ್ದಾರೆ.

ಹೌದು, ನಾನೊಬ್ಬ ದಿಮಾಗಿ ನಕ್ಸಲ್​!

ಸಾಮಾಜಿಕ ಜಾಲತಾಣದಲ್ಲಿ ನಟ ಹಂಚಿಕೊಂಡಿರುವ ವಿಡಿಯೋನಲ್ಲಿ, ಸರ್ಕಾರವನ್ನು ಟೀಕಿಸುವ, ಸರ್ಕಾರದ ನೀತಿಗಳನ್ನು ತಾರ್ಕಿಕವಾಗಿ ಪ್ರಶ್ನಿಸುವವರನ್ನು ದಿಮಾಗಿ ನಕ್ಸಲ್​, ಆಂಟಿ ನ್ಯಾಷನಲ್​ ಮತ್ತು ತುಕ್ಡೆ-ತುಕ್ಡೆ ಗ್ಯಾಂಗ್​ ಎಂದು ಹೇಳಲಾಗುತ್ತದೆ.

ನಾನು ಹೆಮ್ಮೆಯಿಂದ ಹೇಳುತ್ತೇನೆ. ನಾನೊಬ್ಬ ದಿಮಾಗಿ ನಕ್ಸಲ್​. ಈ ದೇಶದ ಚೌಕಿದಾರ, ನನ್ನಂತವರಿಗೆ ದಿಮಾಗಿ ನಕ್ಸಲ್​, ತುಕ್ಡೆ-ತುಕ್ಡೆ ಗ್ಯಾಂಗ್​ ಎಂಬ ಹೆಸರುಗಳನ್ನು ನೀಡುತ್ತಾ ಕುಳಿತ್ತಿದ್ದಾನೆ. ಆದರೆ, ದೇಶದಲ್ಲಿ ನಿಜವಾಗಿಯೂ ಯಾವುದಾದರೂ 'ತುಕ್ಡೆ-ತುಕ್ಡೆ ಗ್ಯಾಂಗ್' ಇದ್ದರೆ, ಅದು ಈ ಅಕ್ರಮ ಸರ್ಕಾರವೇ ಆಗಿದೆ," ಎಂದು ನಸೀರುದ್ದೀನ್ ಶಾ ಆಕ್ರೋಶ ಹೊರಹಾಕಿದ್ದಾರೆ.

Also Read
ಕೊಡಗಿನ ಬೆಡಗಿಯನ್ನು 'ತಮಿಳು ನಟಿ' ಎಂದ ಜಾವೇದ್ ಅಖ್ತರ್: ರಶ್ಮಿಕಾ ಪರ ಬ್ಯಾಟ್ ಬೀಸಲು ಹೋಗಿ 'ಕ್ಷಮೆ' ಕೇಳಿದ ಗೀತರಚನಾಕಾರ! Javed Akhtar
Bollywood veteran actor Naseeruddin Shah

ಜನ ಎಲ್ಲವನ್ನು ನೋಡುತ್ತಿದ್ದಾರೆ

2006 ರಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್​ ಚುನಾವಣೆಯನ್ನು ನಡೆಸುತ್ತಿಲ್ಲ. ಮೊದಲು, ಜವಹರಲಾಲ್​ ನೆಹರು ವಿಶ್ವ ವಿದ್ಯಾಲಯ ಆಮೇಲೆ ಸತ್ಯಜೀತ್​ ರೇ ಫಿಲ್ಮ್​ ಇನ್ಸಿಸ್ಟಿಟ್ಯೂಟ್​ ಈಗ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯಗಳನ್ನು ಸರ್ಕಾರಿ ಗುರಿಯಾಸಿಕೊಂಡಿದೆ. ದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರಜಾಪ್ರಭುತ್ವವನ್ನು ನಾಶ ಪಡಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರ ಎಲ್ಲೆಲ್ಲಿ, ಏನೇನೂ ಮಾಡುತ್ತಿದೆ ಎಂದು ದೇಶದ ಜನರು ನೋಡುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರವನ್ನು ಮುಂದೆ ನೀಡುತ್ತಾರೆ. ಪ್ರಸ್ತುತ ಈ ಪ್ರತಿಭಟನೆಗೆ ಜನ ಬೆಂಬಲ ದೊರೆಯಬೇಕು, ಸರ್ಕಾರವನ್ನು ನಾವು ಪ್ರಶ್ನಿಸಬೇಕೆಂದು ಅವರು ವಿಡಿಯೋನಲ್ಲಿ ಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net