

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆ ಬಳಿಕ ಬಹುತೇಕ ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲೂ ಅಪ್ಪು ಅವರನ್ನು ಸ್ಮರಿಸಿಕೊಳ್ಳುವುದು ನಡೆದಿದ್ದು, ಕೆಜಿಎಫ್ 2 ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲೂ ಈ ಅಪ್ಪುಸ್ಮರಣೆ ಮುಂದುವರಿದಿದೆ.
ಸಮಾರಂಭದಲ್ಲಿ ಬಹಳಷ್ಟು ಮಂದಿ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ಕೂಡ ವಿ ಮಿಸ್ ಯೂ ಅಪ್ಪು ಸರ್ ಎನ್ನುತ್ತಲೇ ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.
ಹೊಂಬಾಳೆ ಶುರುವಾಗಿದ್ದೇ ಪುನೀತ್ ಅವರಿಂದ ಎಂದ ಯಶ್, ಅಪ್ಪು ಎಲ್ಲ ಎನ್ನುವ ಭಾವನೆಯೇ ಇಲ್ಲ. ನಮ್ಮಲ್ಲಿ ಅವರು ಸದಾ ಜೀವಂತ, ನಾವು ನಿಮ್ಮ ಮಾರ್ಗದರ್ಶನದಲ್ಲೇ ನಡೆಯುತ್ತೇವೆ ಶಿವಣ್ಣ ಎಂದರು. ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿ, ಪುನೀತ್ ರಾಜಕುಮಾರ್ಗೆ ಈ ಚಿತ್ರ ಅರ್ಪಣೆ ಎಂದರು.