More

    ಮೊಬೈಲ್​ಫೋನ್​ ಎತ್ತಿಟ್ಟಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಎಂಟನೇ ತರಗತಿ ವಿದ್ಯಾರ್ಥಿ!

    ಶಿವಮೊಗ್ಗ: ಪರೀಕ್ಷೆ ಸಮೀಪಿಸುತ್ತಿದೆ, ಮೊಬೈಲ್​​ಫೋನ್​ ಬಿಟ್ಟು ಸರಿಯಾಗಿ ಓದು ಎಂದು ಮೊಮ್ಮಗನಿಗೆ ಅಜ್ಜ-ಅಜ್ಜಿ ಬುದ್ಧಿವಾದ ಹೇಳಿದರು. ಆದರೆ ಅವನು ಕೇಳಲಿಲ್ಲ, ಮೊಬೈಲ್​ಫೋನ್​ ಎತ್ತಿಟ್ಟರೆ ಓದಬಹುದು ಎಂದು ಭಾವಿಸಿದ ಅವರು ಮೊಮ್ಮಗನಿಗೆ ಸಿಗದಂತೆ ಎತ್ತಿಟ್ಟರು. ಅಜ್ಜ-ಅಜ್ಜಿ ಮೊಬೈಲ್​ಫೋನ್​ ಕೊಡುತ್ತಿಲ್ಲ ಎಂದು ಅವನು ಮನೆಯನ್ನೇ ಬಿಟ್ಟು ಹೋದ.

    ಮನೆ ಬಿಟ್ಟು ಹೋಗಿ ವಿದ್ಯಾರ್ಥಿ ಮಾಡಿದ್ದೇನು ಎಂದರೆ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು. ಕಡೆಗೆ ಹೇಗೋ ಪತ್ತೆ ಮಾಡಿ ಆತನನ್ನು ವಾಪಸ್ ಕರೆದುಕೊಂಡು ಬಂದ ಪೊಲೀಸರು ಅವನನ್ನು ಅವರ ಅಪ್ಪ-ಅಮ್ಮನಿಗೆ ಒಪ್ಪಿಸಿದ್ದು. ಮೊಬೈಲ್​ಫೋನ್​ ನೋಡಬೇಕೆಂದರೆ ನಮ್ಮ ಸ್ಟೇಷನ್‌ಗೆ ಬಾ ಎಂದು ಪೊಲೀಸರು ಹೇಳಿ ಕಳುಹಿಸಿದ್ದಾರಂತೆ.

    ಏನಿದು ಪ್ರಕರಣ?: ಶಿಕಾರಿಪುರದ ಚನ್ನಕೇಶವ ನಗರದ ಸವಿತ ಮತ್ತು ಮಲ್ಲಪ್ಪ ದಂಪತಿಯ ಎರಡನೇ ಪುತ್ರ ಚರಣ್ ಎಂಟನೇ ತರಗತಿ ಓದುತ್ತಿದ್ದು, ಮಾಳೂರು ಗ್ರಾಮದಲ್ಲಿರುವ ಅಜ್ಜ-ಅಜ್ಜಿ (ತಾಯಿಯ ತವರು)ಮನೆಯಲ್ಲಿ ಬಿಟ್ಟಿದ್ದರು. ಅಲ್ಲಿಯೇ ಸರ್ಕಾರಿ ಶಾಲೆಗೆ ಹೋಗುತ್ತಿದ್ದ. ಚರಣ್ ಈಚೆಗೆ ಮೊಬೈಲ್​ಫೋನ್​ ಅತಿಯಾಗಿ ಬಳಕೆ ಮಾಡುತ್ತಿದ್ದ ಎನ್ನಲಾಗಿದ್ದು, ಓದಿನ ಕಡೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ಮೊಮ್ಮಗನ ಭವಿಷ್ಯ ರೂಪಿಸುವ ಹೊಣೆ ಹೊತ್ತಿದ್ದ ಅಜ್ಜ-ಅಜ್ಜಿ, ಮೊಬೈಲ್​ಫೋನ್​ ಅತಿಯಾಗಿ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೂ ಆತ ಕೇಳಿಲ್ಲ. ಕಡೆಗೆ ಅವರು ಮೊಬೈಲ್​ಫೋನ್​ ಸಿಗದಂತೆ ಎತ್ತಿಟ್ಟು, ಶಿಕಾರಿಪುರದಲ್ಲಿರುವ ಅವನ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.

    ಅಜ್ಜ-ಅಜ್ಜಿ ಮೊಬೈಲ್​ಫೋನ್​ ಕೊಡುತ್ತಿಲ್ಲ ಎಂದು ಮುನಿಸಿಕೊಂಡ ಚರಣ್ ಮಾಳೂರಿನಿಂದ ಸೀದಾ ಶಿಕಾರಿಪುರಕ್ಕೆ ಹೋಗಿ ಅಜ್ಜ-ಅಜ್ಜಿ ಮೇಲೆಯೇ ದೂರು ಹೇಳಿದ್ದಾನೆ. ಮೊಬೈಲ್​ಫೋನ್​ ಕೊಡಲು ಅವರಿಗೆ ಹೇಳಿ ಎಂದು ದುಂಬಾಲು ಬಿದ್ದಿದ್ದಾನೆ. ಆಯ್ತು, ಹೇಳ್ತೇವೆ, ಮಾಳೂರಿಗೆ ಹೋಗು ಎಂದು ಮಗನನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಚರಣ್ ಮಾಳೂರಿಗೆ ಹೋಗಲೇ ಇಲ್ಲ. ಮೊಮ್ಮಗ ಇಲ್ಲಿಗೆ ಬಂದಿಲ್ಲ ಎಂದು ಅಜ್ಜ-ಅಜ್ಜಿ ಆತನ ತಂದೆ -ತಾಯಿಗೆ ತಿಳಿಸಿದ್ದಾರೆ.

    ಮನೆಬಿಟ್ಟು ಹೋಗಿರುವುದು ಖಚಿತವಾಗುತ್ತಿದ್ದಂತೆ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರು ದಾಖಲು ಮಾಡಿಕೊಂಡ ಪೊಲೀಸರು ತಮ್ಮ ಕೆಲಸ ಆರಂಭಿಸಿದಾಗ ಮನೆ ಬಿಟ್ಟು ಹೋಗಿರುವ ಚರಣ್ ಹಿರೇಕೆರೂರು ಪಟ್ಟಣದ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದು ಬೆಳಕಿಗೆ ಬಂದಿದೆ.
    ಹಿರೇಕೆರೂರಿಗೆ ತೆರಳಿದ ಪೊಲೀಸರು ಅವನನ್ನು ಶಿಕಾರಿಪುರಕ್ಕೆ ಕರೆದುಕೊಂಡು ಬಂದು ಆತನ ಅಪ್ಪ-ಅಪ್ಪನಿಗೆ ಒಪ್ಪಿಸಿದ್ದಾರೆ.

    ಆನ್‌ಲೈನ್ ಕ್ಲಾಸ್ ಪರಿಣಾಮ: ಕರೊನಾ ಅಲೆಯ ಸಂದರ್ಭದಲ್ಲಿ ಶಾಲಾ -ಕಾಲೇಜುಗಳಿಗೆ ಸುದೀರ್ಘ ರಜೆ ಘೋಷಣೆ ಮಾಡಿದಾಗ ಆನ್‌ಲೈನ್ ಕ್ಲಾಸ್‌ಗಳನ್ನು ಆರಂಭ ಮಾಡಲಾಗಿತ್ತು. ಆಗಿನಿಂದಲೇ ಬಹುತೇಕ ಮಕ್ಕಳು ಮೊಬೈಲ್​ಫೋನ್​ ಗೀಳು ಅಂಟಿಸಿಕೊಂಡಿದ್ದು, ಅವರನ್ನು ಈ ಗೀಳಿನಿಂದ ಹೊರತರಲು ಬಹುತೇಕ ಪಾಲಕರು ಹೆಣಗಾಡುತ್ತಿದ್ದಾರೆ.

    ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts