ಸ್ವರ್ಗದಲ್ಲಿ ರಾಕಿಂಗ್ ದಂಪತಿ; ಮಾಲ್ಡೀವ್ಸ್​ನಲ್ಲಿ ಮಕ್ಕಳೊಂದಿಗೆ ಪ್ರವಾಸ

Yash
Published on

ಬೆಂಗಳೂರು: ಸಿನಿಮಾ ತಾರೆಯರಿಗೂ ಜಾಲಿ ಟ್ರಿಪ್​ಗೂ ಅದೇನೋ ನಂಟು. ಸದಾ ಒಂದಿಲ್ಲೊಂದು ದೇಶಕ್ಕೆ ತೆರಳಿ ಒಂದಷ್ಟು ದಿನಗಳ ಕಾಲ ರಜೆಯ ಮಜ ಅನುಭವಿಸಿ ಬರುತ್ತಾರೆ. ಆದರೆ, ಕಳೆದ ವರ್ಷ ಮಾತ್ರ ಹಾಗಾಗಿರಲಿಲ್ಲ. ಕರೊನಾ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲಿಯೇ ಠಿಕಾಣಿ ಹೂಡಿದ್ದರು. ಇನ್ನು ಕೆಲವರು ಲಾಕ್​ಡೌನ್ ಸಡಿಲವಾಗುತ್ತಿದ್ದಂತೆ ಮಿಸ್ ಮಾಡಿಕೊಂಡಿದ್ದ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ಅದೇ ರೀತಿ ಇದೀಗ ಸ್ಯಾಂಡಲ್​ವುಡ್ ಸ್ಟಾರ್ ಜೋಡಿ ಯಶ್- ರಾಧಿಕಾ ಮಕ್ಕಳಾದ ಐರಾ ಮತ್ತು ಯಥರ್ವ ಸಮೇತ ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದಾರೆ. ಆ ಭೇಟಿಯ ಒಂದಷ್ಟು ಫೋಟೋಗಳನ್ನು ಯಶ್ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಆ ಪ್ರವಾಸದ ಕ್ಷಣಕ್ಕೆ ಒಳ್ಳೇ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. ‘ಭೂಲೋಕದಲ್ಲಿ ಯಾವುದಾದರೂ ಸ್ವರ್ಗ ಇದೆಯೆಂದರೆ, ಅದು ಈ ಸ್ಥಳವೇ! ಮಾಲ್ಡೀವ್ಸ್. ನಾವೀಗ ಇಲ್ಲಿಗೆ ಬಂದಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net