

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟ ಡಾಲಿ ಧನಂಜಯ ಕಳೆದ ಬುಧವಾರ (ಆ. 23) 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರೊನಾ ಲಾಕ್ಡೌನ್ನಿಂದಾಗಿ ಧನಂಜಯ ಕಳೆದ ಮೂರು ವರ್ಷಗಳಿಂದ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹೀಗಾಗಿ ಈ ಬಾರಿ ನಂದಿ ಲಿಂಕ್ಸ್ ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಳಿಕ ಅಂದು ರಾತ್ರಿ ಸ್ಯಾಂಡಲ್ವುಡ್ ತಾರೆಯರ ಜತೆ ಕೇಕ್ ಕತ್ತರಿಸಿ, ರ್ಬತ್ಡೇ ಆಚರಿಸಿಕೊಂಡಿದ್ದಾರೆ.
ಯಶ್, ರತ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ, ದುನಿಯಾ ವಿಜಯ್, ರಮೇಶ್ ಅರವಿಂದ್, ಸತೀಶ್ ನೀನಾಸಂ, ನಾಗಭೂಷಣ, ಲೂಸ್ ಮಾದ ಯೋಗಿ, ಪ್ರಮೋದ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್, ಪ್ರೇಮ್, ಮಿಲನಾ ನಾಗರಾಜ್, ಅಮೃತಾ ಐಯಂಗಾರ್, ರೋಷನಿ ಪ್ರಕಾಶ್, ಸಂಜನಾ ಆನಂದ್, ಅಮೃತಾ ಪ್ರೇಮ್, ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ಲಹರಿ ವೇಲು ಸೇರಿ ಹಲವಾರು ಮಂದಿ ಡಾಲಿ ಧನಂಜಯ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿ ನಟನಿಗೆ ಶುಭಹಾರೈಸಿದ್ದಾರೆ.
ಸದ್ಯ ಧನಂಜಯ "ಉತ್ತರಕಾಂಡ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದು, "ಜೀಬ್ರಾ' ಎಂಬ ತೆಲುಗು ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.