ಕಾಲಿವುಡ್​ನ ಖ್ಯಾತ ನಿರ್ದೇಶಕ ಶಂಕರ್ ಜತೆ ಯಶ್ ಸಿನಿಮಾ?

Yash
Published on

ಬೆಂಗಳೂರು: ‘ಕೆಜಿಎಫ್ ಚಾಪ್ಟರ್ 2’ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು?- ಹೀಗೊಂದು ಪ್ರಶ್ನೆ ಅವರ ಕೋಟ್ಯಂತರ ಅಭಿಮಾನಿಗಳಲ್ಲಿದೆ. ಜನ್ಮದಿನಕ್ಕೆ ಹೊಸ ಸಿನಿಮಾ ಘೋಷಣೆ ಆಗಬಹುದು ಎಂಬ ನಿರೀಕ್ಷೆಯಿತ್ತಾದರೂ, ಅದ್ಯಾವುದೂ ಈಡೇರಲಿಲ್ಲ. ಆದರೆ, ಯಶ್ ಹೆಸರು ಮಾತ್ರ ಹಲವು ನಿರ್ದೇಶಕರ ಹೆಸರಿನ ಜತೆ ಸೇರಿಕೊಂಡಿದೆ. ಅಂದರೆ, ಕಾಲಿವುಡ್​ನ ಖ್ಯಾತ ನಿರ್ದೇಶಕ ಶಂಕರ್ ಜತೆ ಯಶ್ ಸಿನಿಮಾ ಮಾಡಲಿದ್ದಾರಂತೆ! ಈ ಮೊದಲು ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಜತೆಗೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಇತ್ತಾದರೂ ಆ ಸುದ್ದಿ ನಿಜವಾಗಲಿಲ್ಲ.

ಇದೀಗ ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಒಂದು ಪೀರಿಯಡ್ ಚಿತ್ರದಲ್ಲಿ ಯಶ್ ನಾಯಕನಾಗಿ ನಟಿಸಲಿದ್ದು, ಆ ಚಿತ್ರವನ್ನು ಶಂಕರ್ ನಿರ್ದೇಶನ ಮಾಡಲಿದ್ದಾರಂತೆ. ಸದ್ಯಕ್ಕೆ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಆದರೂ ಇದಕ್ಕೆ ಶಂಕರ್ ಆಗಲೀ, ಯಶ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯದ ಮಾಹಿತಿ ಪ್ರಕಾರ, ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆ ಆಗುವವರೆಗೂ ಬೇರಾವ ಚಿತ್ರವನ್ನೂ ಯಶ್ ಒಪ್ಪಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ. ಇತ್ತ ಕಮಲ್ ಹಾಸನ್ ಜತೆಗೆ ‘ಇಂಡಿಯನ್ 2’ ಚಿತ್ರದ ಕೆಲಸಗಳಲ್ಲಿ ಶಂಕರ್ ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net