

ಮುಂಬೈ: ಪ್ರತೀ ವರ್ಷದಂತೆ ಈ ವರ್ಷ ಸಹ ಇಂಟರ್ನೆಟ್ ಮೂವಿ ಡೇಟಾಬೇಸ್ (IMDB), ಭಾರತೀಯ ಚಿತ್ರರಂಗದ ಜನಪ್ರಿಯ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕನ್ನಡಿಗ ಯಶ್ ಸಹ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲೂ ಜೋರಾಗಿದೆ ‘ವಿಜಯಾನಂದ’ ಚಿತ್ರದ ಹವಾ!
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಧನುಶ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ 'ಗ್ರೇ ಮ್ಯಾನ್' ಚಿತ್ರವಲ್ಲದೆ, ತಮಿಳಿನ 'ಮಾರನ್', 'ತಿರುಚಿತ್ರಂಬಲಂ', 'ನಾನೇ ವರುವೆನ್' ಮತ್ತು 'ವಾದಿ' ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಚಿತ್ರದಲ್ಲಿ ನಟಿಸಿದ್ದ ಆಲಿಯಾ ಭಟ್, ರಾಮ್ ಚರಣ್ ತೇಜ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಮೂವರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಕಂಡ ಪ್ಯಾನ್ ಇಂಡಿಯಾ ಚಿತ್ರ 'ಕೆಜಿಎಫ್ 2' ನಿಂದಾಗಿ ಯಶ್, ಈ ಪಟ್ಟಿಯಲ್ಲಿದ್ದಾರೆ.
ವಿಶೇಷವೆಂದರೆ, ಈ 10 ಜನರ ಪಟ್ಟಿಯಲ್ಲಿ ನಾಲ್ವರನ್ನು ಹೊರತುಪಡಿಸಿದರೆ, ಮಿಕ್ಕವರೆಲ್ಲ ದಕ್ಷಿಣ ಭಾರತದವರೇ. ಐಶ್ವರ್ಯಾ ರೈ, ಹೃತಿಕ್ ರೋಶನ್, ಕಿಯಾರಾ ಅಡ್ವಾಣಿ ಮತ್ತು ಆಲಿಯಾ ಭಟ್ ಮಾತ್ರ ಬಾಲಿವುಡ್ ಚಿತ್ರರಂಗವನ್ನು ಪ್ರತಿನಿಧಿಸುವವರು. ಅದರಲ್ಲೂ ಐಶ್ವರ್ಯಾ ರೈ ಮತ್ತು ಆಲಿಯಾ ಭಟ್ ಇಬ್ಬರೂ ಈ ವರ್ಷ ದಕ್ಷಿಣದ ಚಿತ್ರಗಳಲ್ಲಿ ನಟಿಸಿದ್ದರು.